ನಾಳೆ ಬಿಐಎಸ್ ಶಾಲೆಗೆ ವಾರ್ಷಿಕ ಹಬ್ಬದ ಸಂಭ್ರಮ; 9 ವರ್ಷ ಯಶಸ್ವಿ ಉಡಾನ್ ಪೂರ್ಣಗೊಳಿಸಿದ ಬಿಐಎಸ್

ಮುದ್ದೇಬಿಹಾಳ: ನಾಳೆ ಬಸವ ಇಂಟರ್ ನ್ಯಾಷನಲ್ ಶಾಲೆಗೆ ೯ ವರ್ಷದ ವಾರ್ಷಿಕ ಉತ್ಸವದ ಸಂಭ್ರಮ. ಮುದ್ದೇಬಿಹಾಳ ನಗರದ ತಾಳಿಕೋಟೆ ರಸ್ತೆಯ ಆಶ್ರಯ ಕಾಲೋನಿ ಹತ್ತಿರ ಇರುವ ಬಸವ ಇಂಟರ್ ನ್ಯಾಷನಲ್ ಶಾಲೆ ಈಗ ಯಶಸ್ವಿ ಹಾದಿಯಲ್ಲಿ 9 ವರ್ಷದ ಉಡಾನವನ್ನು ಪೂರ್ಣಗೊಳಿಸಿದೆ. ವಾರ್ಷಿಕೋತ್ಸವದ ಸಮಾರಂಭವು ಬಹಳ ಉತ್ಸವಪೂರ್ಣದಿಂದ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಹಲವು ಪ್ರತಿಭಾ ಪ್ರದರ್ಶನಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ, ನಾಟಕ, ಹಾಡುಗಳನ್ನು ಇತ್ಯಾದಿ ಮನೋರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಮಕ್ಕಳ ಪೋಷಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕೆಂದು ಶಾಲಾ ಆಡಳಿತ ಮಂಡಳಿ ಪೋಷಕರಲ್ಲಿ, ಸಾರ್ವಜನಿಕರಲ್ಲಿ ಮತ್ತು ನಗರದ ಜನರಲ್ಲಿ ಕೋರಿದೆ.

ಇನ್ನು ಈ ಶಾಲೆಯ ವಾರ್ಷಿಕ ಉತ್ಸವದ ಹಬ್ಬಕ್ಕೆ ಅಧ್ಯಕ್ಷ ಸ್ಥಾನವನ್ನು ಶಾಲೆಯ ಚೇರ್ಮನ್ ಶಿವುಕುಮಾರ್ ಹರ್ಲಾಪುರ, ಹಾಗೂ ಮುಖ್ಯ ಅಥಿತಿಗಳಾಗಿ, ಬಿಇಓ ಬಿ.ಎಸ್. ಸಾವಳಗಿ, ಮುದ್ದೇಬಿಹಾಳ ಸಿಪಿಐ ಮೊಹ್ಮದ್ ಫೈಸೂದ್ದೀನ್, ತಾಳಿಕೋಟ್ ಪಿಎಸ್‌ಐ ಜ್ಯೋತಿ ಖೋಟ್, ನಾಲತವಾಡ ವ್ಯಪಾರ ಉದ್ಯಮಿ, ರಾಜಶೇಖರ್ ಚಿನಿವಾಲರ್ ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಮುದ್ದೇಬಿಹಾಳ ತಹಶೀಲ್ದಾರ್ ಕೀರ್ತಿ ಚಾಲಕ ಅವರು ಆಗಮಿಸಲಿದ್ದಾರೆ. ಸರಿಯಾಗಿ ಸಂಜೆ ೪:೩೦ಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಇದಕ್ಕೂ ಮುನ್ನ ಅಂದ್ರೆ ಬೆಳಗಿನ ಜಾವ ೮ ಗಂಟೆಗೆ ಶಾಲೆಯಲ್ಲಿ ಪ್ರಶಸ್ತಿಗಳ ವಿತರಣಾ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ಚಟುವಟಿಕೆ ಹಾಗೂ ಇತರ ಶಿಕ್ಷಣ ಪ್ರೋಟೋಕಾಲ್ ಹೊರತು ಪಡಿಸಿ ಇತರ ಚಟುವಟಿಕೆಗಳಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸಾಲಮರದ ತಿಮ್ಮಕ್ಕನ ಅವರ ಪುಷ್ಪನಮನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಳೆದ ಎರಡು ವರ್ಷದಿಂದ ಕೇವಲ ಎಕ್ಸಿಬೀಷನ್ ಕಾರ್ಯಕ್ರಮ ಮೂಲಕ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಿ ಮನೆಮಾತಾಗಿದ್ದ ಬಿಐಎಸ್ ಶಾಲೆ ಈ ಬಾರಿ ವಾರ್ಷಿಕ ಉತ್ಸವವನ್ನು ವೈಭವಿಕರಣದಿಂದ ಆಚರಿಸುತ್ತಿದೆ. ವೇದಿಕೆಯ ಮೂಲಕ ಮಕ್ಕಳಲ್ಲಿ ಅಡಗಿರುವ ಶ್ರೇಷ್ಠ ಪ್ರತಿಭೆಯನ್ನು ಸಾರ್ವಜನಿಕರ ಮುಂದೆ ತರಲು ಈ ಉತ್ಸವ ಪ್ರಮುಖವಾಗಿದೆ. ಇದು ಕೇವಲ ಶಾಲೆಗೆ ವಾರ್ಷಿಕ ಹಬ್ಬವಾಗದೇ ಇದು ಮಕ್ಕಳ ಪ್ರತಿಭೆಗಳ ಹಬ್ಬವಾಗಿ ಹೊರಹೊಮ್ಮಲಿದೆ. ಇನ್ನು ಈ ವಾರ್ಷಿಕ ಉತ್ಸವವನ್ನು ಯಶಸ್ವಿಯಾಗಿ, ಸರಿಯಾಗಿ ಪೂರ್ಣಗೊಳಿಸಲು ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಒಂದು ತಿಂಗಳ ಮುಂಚಿತವಾಗಿ ಮಕ್ಕಳಿಗೆ ತಯಾರಿ ನಡೆಸುವ ಮೂಲಕ ಈ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಕೊಡೆಗೆಯನ್ನು ನೀಡಿದ್ದಾರೆ.

SURAJ RISALDAR
Author: SURAJ RISALDAR

Leave a Comment