
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯ ಚಟುವಟಿಕೆ ಜೊತೆಗೆ ಕ್ರೀಡಾ ಚಟುವಟಿಕೆ ಕೂಡ ಮುಖ್ಯ: ಡಾ. ನೀಲಪ್ಪ ಹೊಸಮನಿ
ಮದ್ದೇಬಿಹಾಳ (SUNAMI NEWS): ಪಠ್ಯ ಚಟುವಟಿಕೆಯೊಂದಿಗೆ ಸಾಂಪ್ರದಾಯಿಕ , ಸಾಂಕೃತಿ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಬಸವನ ಬಾಗೇವಾಡಿ ಸರ್ಕಾರಿ ಪಿಯು ಕಾಲೇಜ ಪ್ರಿನ್ಸಿಪಾಲ್ ಡಾ. ನೀಲಪ್ಪ ಹೊಸಮನಿ ಅವರು ಹೇಳಿದರು. 1990-91ನೇ ಸಾಲಿನ ಸ್ನೇಹ ಸಂಗಮ ಗೆಳೆಯರ ಬಳಗ ವತಿಯಿಂದ ಮುದ್ದೇಬಿಹಾಳ ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭ ಹಾಗೂ ಸೀಮಂತ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇತ್ತಿಚೆಗೆ ನೇಪಾಳದಲ್ಲಿ ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಹಮ್ಮಿಕೊಂಡಿದ್ದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಗೆದ್ದು ಚಿನ್ನದ ಪದಕ ಪಡದು ದೇಶದ ಕೀರ್ತಿಯನ್ನು ಹೆಚ್ಚಿಸಿದ ತಾಲೂಕಿನ ಕ್ರೀಡಾಪಟುಗಳನ್ನು ಗುರುತಿಸಿದ ಸ್ನೇಹ ಸಂಗಮ ಗೆಳೆಯರ ಬಳಗ ಆ ಮಕ್ಕಳಗೆ ಪ್ರಶಸ್ತಿ ಪುರಸ್ಕಾರ ಮಾಡಿ
































