ದೇವಸ್ಥಾನ ಜಾಗ ಅತಿಕ್ರಮ ತೆರವುಗೊಳಿಸುವಂತೆ ಧರಣಿ ಸತ್ಯಾಗ್ರಹ

ಮುದ್ದೇಬಿಹಾಳ: ತಾಲ್ಲೂಕಿನ ನೇಬಗೇರಿ ಗ್ರಾಮದ ಶ್ರೀ ಯಮನೂರಪ್ಪಾ ದೇವಸ್ಥಾನದ ಅತಿಕ್ರಮಣ ಮಾಡಿದ ಜಾಗೆಯನ್ನು ತೆರವೂಗೊಳಿಸುವಂತೆ ಆಗ್ರಹಿಸಿ ವಿವಿಧ ದಲಿತಪರ ಸಂಘಟಕರಿಂದ ಕೋಳೂರ ಗ್ರಾ.ಪಂ ಎದುರು ಶುಕ್ರವಾರ ಧರಣಿ ಹಮ್ಮಿಕೊಂಡರು.

ಈ ವೇಳೆ ಧರಣಿ ಸ್ಥಳಕ್ಕೆ ಆಗಮಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ ಕೋಳೂರ ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ ಕೋಳೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ನೇಬಗೇರಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಬಗಲಿ ಎಂಬುವವರು ಶ್ರೀ ಯಮನೂರಪ್ಪಾ ದೇವಸ್ಥಾನದ ಜಾಗೆಯನ್ನು ಅತಿಕ್ರಮಣ ಮಾಡಿದ್ದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸದರಿಯವರಿಗೆ ನೋಟಿಸ ನೀಡಿದ್ದು ಅಂಗಡಿಯನ್ನು ತೆರವೂಗೊಳಿಸಲು ತಿಳಿಸಲಾಗಿತ್ತು. ಅದರಂತೆ ದಿನಾಂಕ 26/12/2025 ರಂದು ನೇಬಗೇರಿ ಗ್ರಾಮದ ಸದರಿ ಸ್ಥಳದಲ್ಲಿ ಸ್ಥಾನಿಕ ಚೌಕಾಸಿ ಮಾಡಿದಾಗ ೪ ದಿನಗಳಲ್ಲಿ ಅಂಗಡಿಯನ್ನು ತೆರವೂಗೊಳಿಸಿಕೋಳ್ಳುತ್ತೇನೆಂದು ಹೇಳಿಕೆ ನೀಡಿರುತ್ತಾರೆ. ಅದರಂತೆ 4 ದಿನದಲ್ಲಿ ಅಂಗಡಿ ತೆರವೂಗೋಳಿಸದಿದಲ್ಲಿ ಗ್ರಾಮ ಪಂಚಾಯತ ಇಂದ ತೆರವೂಗೊಳಿಸಲಾಗುವುದು ಎಂದು ಈ ಮೂಲಕ ಗ್ರಾಮ ಪಂಚಾಯತ ಆವರಣದಲ್ಲಿ ವಿವಿಧ ಪರ ಧಲಿತ ಸಂಘಟನೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಅವರಿಗೆ ಲಿಖಿತ ರೂಪದಲ್ಲಿ ದಾಖಲೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಶಾಂತ ಕಾಳೆ,ಶೇಖರ ಆಲೂರು,ದೇವರಾಜ ಹಂಗರಗಿ,ಮುತ್ತು ಚಲವಾದಿ,ಪ್ರತಾಪ ಚಲವಾದಿ,ಸೇರಿದಂತೆ ಉಪಸ್ಥಿತರಿದ್ದರು.

SURAJ RISALDAR
Author: SURAJ RISALDAR

Leave a Comment