ಪ್ರತಿಭಾ ಪುರಸ್ಕಾರಗಳು ಮಕ್ಕಳಲ್ಲಿ ಆತ್ಮಬಲ ಹೆಚ್ಚಿಸುತ್ತವೆ: ಸಿಪಿಐ ಫೈಸೂದ್ದೀನ್


ಮುದ್ದೇಬಿಹಾಳ: ಪ್ರತಿಯೊಬ್ಬ ಮಗು ಈ ಜಗತ್ತಿಗೆ ಬರುವ ಮುನ್ನ ಒಂದು ಶ್ರೇಷ್ಠ ಪ್ರತಿಭೆಯನ್ನು ಪಡೆದುಕೊಂಡೆ ಬಂದಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಆ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರಲ್ಲಿ ಆತ್ಮಬಲ ಹೆಚ್ಚುಸುವುದು ಅಂದ್ರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಮುದ್ದೇಬಿಹಾಳ ಸಿಪಿಐ ಮೊಹ್ಮದ್ ಫೈಸೂದೀನ್ ಅವರು ಹೇಳಿದರು.


ಇಂದು ಬಸವ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಮುಂಜಾನೆ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಐಎಸ್ ಶಾಲೆ ಮಕ್ಕಳಿಗೆ ಒಳ್ಳೆಯ ಶಿಸ್ತನ್ನು ನೀಡಿದೆ. ಮಕ್ಕಳಿಗೆ ವಿವಿಧ ವಿನೂತನ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತಿದ್ದಾರೆ ಎಂದರು. ಇನ್ನು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಹಾಗಾಗಿ ಜಾಗೃತರಾಗಿ ಯಾವು ಅಪರಿಚಿತವಾದ ಮೆಸೆಜ್ ಆಗ್ಲಿ, ಕಾಲ್ ಆಗ್ಲಿ ರೀಸೀವ್ ಮಾಡಬೇಡಿ. ಕೂಡಲೇ ಪೊಲೀಸ್‌ರನ್ನು ಸಂಪರ್ಕಿಸಿ ಮಾಹಿತಿ ನೀಡಿ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

https://youtube.com/shorts/68EpJULQ0co?si=C3AU8puNzF5W0fHb


ಇದೇ ವೇಳೆ ಸಿಪಿಐ ಮೊಹ್ಮೋದ್ ಫೈಸೂದ್ದೀನ್ ಸಾಧನೆಗೈದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿದರು. ಇನ್ನು ಶಾಲಾ ಮಕ್ಕಳು ಸಿಪಿಐ ಮೊಹ್ಮದ ಫೈಸೂದ್ದೀನ್ ಅವರನ್ನು ಬರಮಾಡಿಕೊಳ್ಳುವ ದೃಶ್ಯ ಎಲ್ಲರ ಗಮನ ಸೆಳೆಯಿತು.


ಇನ್ನು ವೇದಿಕೆಯ ಮೇಲೆ ಜಗದೀಶ್ ಚಿನಿವಾಲರ್, ಶಾಲೆಯ ಚೇರ್ಮಮನರಾದ ಶಿವುಕುಮಾರ ಹರ್ಲಾಪುರ, ಪ್ರನ್ಸಿಪಾಲ್ ಪ್ರಭಾ ಚಿನಿವಾರ ಉಪಸ್ಥಿತರಿದ್ದರು, ಶಾಲಾ ಶಿಕ್ಷಕರು ಹಾಗು ಸಿಬ್ಬಂದಿ ವರ್ಗ ಮತ್ತು ಮಕ್ಕಳ ಪೋಷಕರು ಹಾಜರಿದ್ದರು. ಇನ್ನು ಸಂಜೆ ವಾರ್ಷಿಕೋತ್ಸವ ಅಂಗವಾಗಿ ಸಾಂಕೃತಿಕ ಕಾರ್ಯಕ್ರಮ ಹಾಗೂ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ.

SURAJ RISALDAR
Author: SURAJ RISALDAR

Leave a Comment