ಶ್ರೀ ಅಯ್ಯಪ್ಯ ಸ್ವಾಮಿ ಮಹಾಪೂಜೆ ಉತ್ಸವ:ಭಕ್ತರಿಗೆ ಆಹ್ವಾನ

ಮುದ್ದೇಬಿಹಾಳ: ನಗರದ ಹೊರವಲಯದ ಹಡಲಗೇರಿ ರಸ್ತೆಯಲ್ಲಿರುವ ಅಯ್ಯಪ್ಪ ಸನ್ನಿಧಿಯಲ್ಲಿ
ದಿನಾಂಕ 29/12/2025 ಸೋಮವಾರ ಬೆಳಗ್ಗೆ 7:30 ಕೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಅಗೋರಿ ಸಾಧುಗಳಿಂದ ಹೋಮ ಹವನ ಜರುಗಲಿದೆ. ನಂತರ 10:45 ಕ್ಕೆ ಕೋಟೆ ಆವರಣದಲ್ಲಿರುವ ಕಾಳಿಕಾದೇವಿ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೆ ಚಂಡಿ ಮೇಳ ವಾದ್ಯದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ಜರುಗಲಿದೆ. ಮಧ್ಯಾಹ್ನ 12:45 ಕ್ಕೆ ಅನ್ನ ಸಂತರ್ಪಣೆ ಜರುಗುವುದು. ಸಂಜೆ 6:45 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭವ್ಯವಾದ ಮಹಾಪೂಜೆ ಮತ್ತು ಪಡಿ ಪೂಜೆ ನೆರವೇರುತ್ತದೆ. ಮುದ್ದೇಬಿಹಾಳ ತಾಲೂಕಿನ ಸದ್ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ಶ್ರೀ ಮುದ್ದೇಬಿಹಾಳ ಅಯ್ಯಪ್ಪ ಸೇವಾ ಸಮಿತಿಯ ಟಿ.ವಿಜಯಬಾಸ್ಕರ,ಅಶೋಕ ಚಟ್ಟೆರ,ಶ್ರೀಶೈಲ ಮೇಟಿ,ಸುನೀಲ ಇಲ್ಲೂರ ಸೇರಿದಂತೆ ಸಮಸ್ತ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರು ತಿಳಿಸಿದ್ದಾರೆ.

SURAJ RISALDAR
Author: SURAJ RISALDAR

Leave a Comment