ಮುದ್ದೇಬಿಹಾಳ: ವಾಹನ ಸವಾರರು ಸಂಚಾರ ಮಾಡುವಾಗ ಹೆಲ್ಮೆಟ್,ಸೀಟ್ ಬೆಲ್ಟ್, ಹಾಕಿ ಸುರಕ್ಷತೆಯೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಮುದ್ದೇಬಿಹಾಳ ಮುದ್ದೇಬಿಹಾಳ ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ,ಸಂಜಯ ತಿಪರೆಡ್ಡಿ ಹೇಳಿದರು.

ಅವರು ತಾಲ್ಲೂಕು ಆಡಳಿತ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಜಾಗೃತ ಸಪ್ತಾಹ ಅಂಗವಾಗಿ ಮಂಗಳವಾರ ನಗರದ ಸಾರಿಗೆ ಘಟಕ,ಆಟೋ ಕಾರ್ ನಿಲ್ದಾಣ,ಕಾಲೇಜು ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ಕುರಿತು ಮತ್ತು ಅಪಘಾತ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಾಹನ, ಚಾಲಕ ಮಾಲೀಕ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಕುಡಿದು ಚಾಲನೆ ಮಾಡುವುದು, ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು,ಅಡ್ಡಾದಿಡ್ಡಿ ವಾಹನ ಚಲಾವಣೆ, ಮಾಡುವುದು ಕಾನೂನಿನ ಪ್ರಕಾರ ಅಪರಾಧ ಆ ರೀತಿ ಕಂಡು ಬಂದಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಸಂಜಯ ತಿಪರೆಡ್ಡಿ, ಆರ್.ಎಸ್.ಬಂಗಿ,ಸಿಬ್ಬಂದಿಗಳಾದ ಪ್ರಕಾಶ ಪೂಜಾರಿ,ಸಂಗಮೇಶ ಚಲವಾದಿ ಸೇರಿದಂತೆ ಉಪಸ್ಥಿತರಿದ್ದರು.








