ನೂತನ ಸಿಪಿಐ’ ಬಿರಾದಾರ’ಗೆ ಗೆಳೆಯರ ಬಳಗದಿಂದ ಅಭಿನಂದನೆ

ಮುದ್ದೇಬಿಹಾಳ: ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಹೆಸರುವಾಸಿಯಾದ ಪಿಎಸ್ಐ ಎಂ.ಬಿ.ಬಿರಾದಾರ ಅವರು ಪದೋನ್ನತಿ ಹೊಂದಿ ಸಿಪಿಐ ಆದ ಹಿನ್ನೆಲೆ ಅವರಿಗೆ ಗೆಳೆಯರ ಬಳಗದಿಂದ ಸಿಹಿ ತಿನ್ನಿಸಿ ಅಭಿನಂದಿಸಿದರು.

ಶುಕ್ರವಾರ ನಗರಕ್ಕೆ ಆಗಮಿಸಿದ ಅವರಿಗೆ ಗೆಳೆಯರ ಬಳಗದ ಮುಖ್ಯಸ್ಥ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಮುತ್ತುಗೌಡ ರಾಯಗೊಂಡ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ,ಸೋಮನಗೌಡ ಮೇಟಿ,ಸಾಗರ ಉಕ್ಕಲಿ,ಮುತ್ತು ಹಿರೇಮಠ ಸೇರಿದಂತೆ ಗೌರವಿಸಿದರು. ಈ ವೇಳೆ ಸಿಬ್ಬಂದಿಗಳಾದ ಶಿವಾನಂದ ಮ್ಯಾಗೇರಿ ಸೇರಿದಂತೆ ಉಪಸ್ಥಿತರಿದ್ದರು.

SURAJ RISALDAR
Author: SURAJ RISALDAR

Leave a Comment