ಮುದ್ದೇಬಿಹಾಳ: ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ, ನಮ್ಮ ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮೀಣ ಭಾಗದ ಪ್ರತಿಭಾವಂತ ಬಡ ಮಕ್ಕಳು ವಿವಿಧ ದೂರದ ಸ್ಥಳಗಳಿಗೆ ಹೋಗಿ ಶಿಕ್ಷಣ ಕಲಿಯುವುದು ಕಷ್ಟಕರ ವಾಗಿದೆ. ಎಂದು ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರವಿ ನಾಯಕ ಹೇಳಿದರು. ಅವರು ಶನಿವಾರ ಕಾಲೇಜಿನಲ್ಲಿ ಹಮ್ಮಿಕೊಂಡ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ನಮ್ಮ ಸಂಸ್ಥೆಯ ಎಲ್ಲ ವಿಭಾಗಗಳು ಸರ್ಕಾರದ ಆದೇಶಕ್ಕನುಗುಣವಾಗಿ ಶಿಕ್ಷಣವನ್ನು ನೀಡುತ್ತ.ಎಲ್ಲ ವಿಭಾಗಗಳಲ್ಲಿ ಅನುಭವಿಕ ನುರಿತ ಉಪನ್ಯಾಸಕ ಸಿಬ್ಬಂದಿಗಳನ್ನು ಹೊಂದಿದೆ. ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಮೂಲಭೂತ ಸೌಲಭ್ಯಗಳನ್ನು ಲ್ಯಾಬ್, ಫಿಲ್ಟರ್ ವಾಟರ್,ಶಾಲಾ ವಾಹನ,ಆಟದ ಮೈದಾನ,ಶೌಚಾಲಯ ಹಾಗೂ ಸ್ವಂತ ಕಟ್ಟಡದಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆಯಾಗಿ,ಅತಿ ವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ.ಎಂದರು.
ಈ ವೇಳೆ ಅಥಿತಿಗಳು ಮತ್ತು ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅಶೋಕ ರಾಠೋಡ,ಆರ್.ವಿ ಕುಲಕರ್ಣಿ, ಬಿ.ಎಚ್.ಹುಡೇದ,ಆಯ್.ಎ.ಬಿರಾದಾರ, ಎಂ.ಎಂ.ಬಾವೂರ,ಪಿ.ಎಲ್.ರಾಠೋಡ,ಶ್ರೀಮತಿ ದೀಪಾ ಕುಲಕರ್ಣಿ,ಆರ್.ಎಸ್.ರಾಠೋಡ, ಕೆ.ಪಿ.ರಾಠೋಡ,ಆರ್.ಎಂ.ವಾಲಿಕಾರ,ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








