ಮುದ್ದೇಬಿಹಾಳ: ನಗರದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ವತಿಯಿಂದ ರವಿವಾರ ಹಮ್ಮಿಕೊಂಡ ಬೃಹತ್ ಹಿಂದೂ ಸಮ್ಮೇಳನ ಅದ್ದೂರಿಯಾಗಿ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ನಗರದ ಬನಶಂಕರಿ ವೃತ್ತದಿಂದ ನಡೆದ ಈ ಶೋಭಾಯಾತ್ರೆಯಲ್ಲಿ ಸಕಲ ವಾಧ್ಯಮೇಳಗಳ ಮೂಲಕ ಗೊಂಬೆ ಕುಣಿತ,ಅನೇಕ ಮಕ್ಕಳು ವಿವಿಧ ರೀತಿಯ ವೇಷಭೂಷಣಗಳನ್ನು ತೊಟ್ಟಿರುವುದು ವಿಶೇಷವಾಗಿತ್ತು.
ಹಲವಾರು ಹಿಂದೂ ಸಮಾಜ ಬಾಂಧವರು ತಮ್ಮದೇ ಶೈಲಿಯಲ್ಲಿ ವಾದ್ಯಮೇಳದ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಮೆರುಗು ತಂದಿತು.
ವಿಶೇಷವಾಗಿ ಮಹಿಳೆಯರು ಮಕ್ಕಳು,ವೃದ್ಧರು ಹುಮ್ಮಸ್ಸಿನಿಂದ ಭಾಗಿಯಾಗಿರುವುದು ಹಿಂದೂ ಸಮ್ಮೇಳನಕ್ಕೆ ಸಾಕ್ಷಿಯಾಯಿತು.

ನಂತರ ಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾದ ಶ್ರೀ ಹಣಮಂತ ಮಳಲಿ ಖ್ಯಾತ ವಾಗ್ಮೀಗಳು ಅವರು,ಮಾತನಾಡಿ ಹಿಂದುತ್ವದ ಮಹತ್ವ,ಆಚಾರ ವಿಚಾರ,ಸನಾತನದ ಅರ್ಥ, ಭಾರತ ದೇಶಗಳಲ್ಲಿ ಇರುವ ಹಿಂದೂಗಳು ಹಿಂದೂ ಎಂದೆ ನೆನಪಿರಲಿ ಗೊಂದಲಕ್ಕೆ ಕಿವಿ ಕೊಡಬೇಡಿ ಎಂದರು.
ಸಮಿತಿಯ ಅಧ್ಯಕ್ಷ ಬಸವರಾಜ ನಾವದಗಿ,ಮಹಿಳಾ ಪ್ರತಿನಿಧಿ ಜಯಶ್ರೀ ಸಾಲಿಮಠ ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಖಾಸ್ಗತ ಸಿದ್ದಲಿಂಗ ದೇವರು ಹಿಂದುತ್ವ, ಭಕ್ತಿ ಭಾವ,ಆಚಾರದ ಕುರಿತು ಮಾತನಾಡಿದರು.

ವೇದಿಕೆ ಮೇಲೆ ಪೂಜ್ಯರು,ಮುಖಂಡರು,ಸಮಾಜದ ಗುರು ಹಿರಿಯರು, ಹಾಗೂ ನಗರದ 50 ಸಮಾಜದ ಅಧ್ಯಕ್ಷರು, ಹಿಂದೂ ಸಮ್ಮೇಳನ ಸಂಚಾಲನ ಸಮಿತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.ವೇದಿಕೆ ಮುಂಬಾಗ ನಗರದ ಗಣ್ಯರು ವ್ಯಾಪಾರಸ್ಥರು,ರಾಜಕೀಯ ಧುರೀಣರು,ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಂಗಮ್ಮ ದೇವರಳ್ಳಿ,ಸೀಮಾ ದಂಡಾವತಿ,ಸಹನಾ ಬಡಿಗೇರ ಪ್ರಾರ್ಥಿಸಿದರೆ,ವೆಂಕನಗೌಡ ಪಾಟೀಲ ಸ್ವಾಗತಿಸಿದರು,ಶಿಕ್ಷಕ ಟಿ.ಡಿ.ಲಮಾಣಿ ನಿರೂಪಿಸಿದರು.
ಪೊಲೀಸ್ ಇಲಾಖೆಯ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ,ಸಿಪಿಐ ಮಹಮ್ಮದ್ ಫಸಿಯುದ್ದೀನ, ಪಿಎಸ್ಐ ಸಂಜಯ ತಿಪರೆಡ್ಡಿ,ಆರ್.ಎಸ್.ಬಂಗಿ,ತಾಳಿಕೋಟೆ ಪಿಎಸ್ಐ ಜ್ಯೋತಿ ಕೋತ ಹಾಗೂ ನೂರಾರು ಸಿಬ್ಬಂದಿಗಳು ಬಂದೂಬಸ್ತ ಹಮ್ಮಿಕೊಂಡಿದ್ದರು.








