ಸುನಾಮಿ ನ್ಯುಸ್ ಮುದ್ದೇಬಿಹಾಳ(Muddebihal) : ದಿ.ಕರ್ನಾಟಕ ಕೋ.ಆಪರೇಟೀವ್ ಬ್ಯಾಂಕ್ ಲಿಮಿಟೆಡ್ ಇವರು ಸಿಬ್ಬಂದಿಗಳ ನೇಮಕಾತಿಗಾಗಿ ನಡೆಸಿದ ಪರೀಕ್ಷೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಪರೀಕ್ಷೆ ಪಾರ್ದರ್ಶಕವಾಗಿ ನಡೆದಿಲ್ಲಾ ಜೊತೆಗೆ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್ ಮಾಜಿ ನಿರ್ದೇಶಕರಾದ ವೆಂಕನಗೌಡ ಸಿ ಪಾಟೀಲ್ ಅವರು ನೇಮಕಾತಿ ಸಮೀತಿಗೆ ತನಿಖೆಗೆ ಆಗ್ರಹಸಿ ಮನವಿ ಸಲ್ಲಿಸಿದ್ದಾರೆ.

ಪರೀಕ್ಷೆ ಬರೆದ ನಾಲ್ಕು ಅಭ್ಯರ್ಥಿಗಳು ಕ್ರಮವಾಗಿ ೧೬೪,೧೬೫,೧೬೬,೧೬೭ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಈ ಲಿಖಿತ ಪರೀಕ್ಷೆಯ ಆ ನಾಲ್ಕು ಜನ ಅಭ್ಯರ್ಥಿಗಳು ಒಂದೆ ಅಂಕ ಹಿಂದೆ ಮುಂದೆ ಹೇಗೆ ಬರಲು ಸಾಧ್ಯ. ಅಂತಿಮ ಪಟ್ಟಿಯಲ್ಲಿ ಬರುವ ಹಾಗೆ ನಕಲು ಮಾಡುವ ಸಾಧ್ಯತೆ ಇದ್ದು, ಇದನ್ನು ಕೂಲಂಕುಶವಾಗಿ ಪರಿಶೀಲಿಸಿ ತಪ್ಪು ಕಂಡು ಬಂದ್ರೆ ಕಾನೂನ ಕ್ರಮಕೈಗೊಳ್ಳಬೆಕೆಂದು ಅವರು ಆಗ್ರಹಿಸಿದ್ದಾರೆ.








