ಸಮಾಜ ಸೇವಕಿ ಸಂಗೀತಾ ನಾಡಗೌಡ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

ಸುನಾಮಿ ನ್ಯುಸ್ ಮುದ್ದೇಬಿಹಾಳ (Muddebihal): ಸಮಾಜ ಸೇವಕರು,ಕಾಂಗ್ರೆಸ್ ಪಕ್ಷದ ಹಿರಿಯ ಮಹಿಳಾ ಮುಖಂಡರು ,ಮತ್ತು ಕೆಪಿಸಿಸಿಯ ಐ.ಎನ್.ಬಿ.ಸಿ.ಡಬ್ಲ್ಯೂ ಎಪ್ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಸಂಗೀತಾ ನೀಲಕಂಠರಾವ ನಾಡಗೌಡ ಅವರಿಗೆ ರಾಷ್ಟ್ರಮಟ್ಟದ ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ದಿನಾಂಕ 10-01-2026 ರಂದು ಐ.ಎಂ.ಐ ಹಾಲ ಲಿಂಗಸೂಗೂರಿನಲ್ಲಿ ನಡೆದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಚಿಂತನೆಗಳ ಸಂಗ್ರಹ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಸಂಗೀತ ನೀಲಕಂಠರಾವ ನಾಡಗೌಡ ಅವರಿಗೆ ಅವರ ಸಮಾಜಮುಖಿ ಸೇವೆ ಗುರ್ತಿಸಿ ರಾಷ್ಟ್ರಮಟ್ಟದ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಉಮಾದೇವಿ ಹಿರೇಮಠ ಸಂಸ್ಥಾಪಕರು ಸ್ವಾಮಿ ಚಾರಿಟೇಬಲ್ ಟ್ರಸ್ಟ್,ಅಮರಯ್ಯಸ್ವಾಮಿ ಹರೇಟನೂರ ಅಧ್ಯಕ್ಷರು ಕಾರುಣ್ಯ ನೆಲೆ ವೃದ್ಧಾಶ್ರಮ ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಇನ್ನೂ ಸಂಗೀತಾ ನೀಲಕಂಠರಾವ ನಾಡಗೌಡ ಅವರಿಗೆ ಅವರ ಅಭಿಮಾನಿ ಬಳಗ,ಬಂಧು ಬಳಗ, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

SURAJ RISALDAR
Author: SURAJ RISALDAR

Leave a Comment