ಮುದ್ದೇಬಿಹಾಳ: ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ ಅಧ್ಯಕ್ಷರು ಸನ್ಮಾನ ಶ್ರೀ ಸಿ ಎಸ್ ನಾಡಗೌಡ (ಅಪ್ಪಾಜಿ ಧಣಿ) ಅವರು ಕಾಂಗ್ರೆಸ್ ಯುವ ಮುಖಂಡ ಮಹ್ಮದ್ ರಫೀಕ್ ಶಿರೋಳ ಅವರನ್ನು ಮುದ್ದೇಬಿಹಾಳ ತಾಲೂಕಿನ ಸರ್ಕಾರೀ ಆಸ್ಪತ್ರೆಯ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ಇನ್ನು ಇವರನ್ನು ಆಯ್ಕೆ ಮಾಡಿದಕ್ಕೆ ಮೊಹ್ಮದ ರಫೀಕ್ ಶಿರೋಳ ಅವರು ಶಾಸಕರಾದ ಅಪ್ಪಾಜಿ ನಾಡಗೌಡ ಅವರಿಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು ಧಣಿ ಜೀ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಮೊಹ್ಮದ ರಫೀಕ್ ಅವರಿಗೆ ಅವರ ಗೆಳೆಯರ ಬಳಗ ಕೂಡ ಶುಭಾಶಯ ಕೋರಿದೆ.








