ಪತ್ರಕರ್ತನ ಕುಟುಂಬದ ಮೋಟಾರ್ ಬೈಕ್ ಕಳ್ಳತನ

ಸುನಾಮಿ ನ್ಯೂಸ್ ಮುದ್ದೇಬಿಹಾಳ (Muddebihal): ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಹತ್ತಿರ ವಿಬಿಸಿ ಹೈಸ್ಕೂಲ್ ಮುಂದೆ ಹೀರೋ ಕಂಪನಿಯ ಹೆಚ್ಎಫ್ ಡಿಲೆಕ್ಸ್ ಬೈಕ್ ನಿಲ್ಲಿಸಿದ ಪತ್ರಕರ್ತ ಕುಟುಂಬನ ಸಹೋದರ ಕ್ರಿಕೆಟ್ ಆಡಲು ವಿಬಿಸಿ ಶಾಲಾ ಮೈದಾನದೊಳಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ಕಳ್ಳತನವಾಗಿದೆ.

ಮುದ್ದೇಬಿಹಾಳ ಟೈಮ್ಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಹಾಗೂ ವಿಜಯಪುರದ ಯೂಟ್ಯೂಬ್ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಜುಬೇರ್ ಸಾತಿಹಾಳ್ ಇವರು ಬಹುತೇಕ ಕಡೆ ತಮ್ಮ ಬೈಕ್ ಕಳವು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಮುದ್ದೇಬಿಹಾಳದಲ್ಲಿರುವ ಬಹುತೇಕ ಸಿಸಿ ಕ್ಯಾಮೆರಾಗಳು ಬಂದಾಗಿರುವ ಕುರಿತು ಗಮನಕ್ಕೆ ಬಂದಿರುವ ವಿಷಯ ತಿಳಿಸಿದ್ದಾರೆ. ಆದಷ್ಟು ಬೇಗ ಮುದ್ದೇಬಿಹಾಳ ನಗರದ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾ ಗಳು ರಿಪೇರಿ ಮಾಡಲು ಪೊಲೀಸ್ ಇಲಾಖೆ ಮುಂದಾಗಬೇಕಾಗಿದೆ.


ಬೈಕ್ ಕಳವು ಪ್ರರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಈ ರೀತಿ ಕಳ್ಳತನ ಪ್ರಕರಣಗಳು ತಡೆಯಲು ಪೊಲೀಸ್ ಇಲಾಖೆ ವಿಶೇಷ ರೀತಿಯ ನಿಗಾಹ ವಹಿಸುವುದು ಅವಶ್ಯ ಆಗಿದೆ. ಮುದ್ದೇಬಿಹಾಳ ನಗರದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಿ ಶಭಾಷ್ ಗಿರಿ ಪಡೆದ ಪೊಲೀಸ್ ಇಲಾಖೆ ಈಗ ಕಳ್ಳತನ ಪ್ರಕರಣ ತಡೆಯಲು ಮುಂದಾಗುವುದರೊಂದಿಗೆ ಕಳ್ಳತನ ಗ್ಯಾಂಗ್ ಮಟ್ಟ ಹಾಕಬೇಕಾಗಿದೆ.
ಕಳ್ಳರನ್ನು ಬಂಧಿಸುವದರ ಮೂಲಕ ಕಳ್ಳರ ಹೆಡೆಮುರಿ ಕಟ್ಟಬೇಕಾಗಿದೆ.
ಆದಷ್ಟು ಬೇಗ ಪತ್ರಕರ್ತನ ಕುಟುಂಬದ ಬೈಕ್ ಪ್ರಕರಣ ಭೇದಿಸುವುದರೊಂದಿಗೆ ಬೈಕ್ ಗಳು ಪತ್ತೆ ಹಚ್ಚಬೇಕಾಗಿದೆ.

SURAJ RISALDAR
Author: SURAJ RISALDAR

Leave a Comment