ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ನಗರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯ (ಬಿಇಓ) ಕಚೇರಿಯ ಮುಂದೆ ವೇತನ ವಿಳಂಬ ನೀತಿ ಖಂಡಿಸಿ ಬಿ.ಜಿ. ಬಿರಾದಾರ್ ರವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆದಿದೆ. ತಂಗಡಗಿಯ ಚರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕುರಿತು ಅವರು ಉಲ್ಲೇಖಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ನನ್ನ ಸಂಬಳ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸಪ್ಪ ಸಾವಳಗಿ ಇವರು ಈ ಹೋರಾಟದ ಕುರಿತು ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ. ಬೇಡಿಕೆ ನ್ಯಾಯ ಸಮ್ಮತ ಹಾಗಿದ್ದರೆ ಅದನ್ನು ತಕ್ಷಣ ಪರಿಹರಿಸಬೇಕಾಗಿದೆ.








