ಸುನಾಮಿ ನ್ಯೂಸ್ ಮುದ್ದೇಬಿಹಾಳ (Muddebihal): ಮುದ್ದೇಬಿಹಾಳ ಮಹಾಂತೇಶ್ ನಗರ ಎಂಟು ಗಡಗಡಿ ಬಾವಿಯ ಹತ್ತಿರ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳು ಅನೇಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಚ್ಚುತ್ತಿರುವ ಘಟನೆಗಳು ಸಾಕಷ್ಟು ನಡೆದಿವೆ.
ಈ ವಿಷಯ ಕುರಿತು ಅನೇಕ ಬಾರಿ ಪುರಸಭೆಗೆ ದೂರು ನೀಡಿ ಕ್ರಮ ಕೈಗೊಳ್ಳಲು ತಿಳಿಸಿದರು ಸಹ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಪಕ್ಕದಲ್ಲಿ ಖಾಸಗಿ ಶಾಲೆ ಮತ್ತು ಫಾರೂಕ ಮಸೀದಿಗೆ ಅರಬ್ಬಿ ಕಲಿಯಲು ಬರುವ ಚಿಕ್ಕ ಮಕ್ಕಳಿಗೆ ಇಲ್ಲಿ ಬೀದಿ ನಾಯಿಗಳ ಕಿರುಕುಳ ಹೆಚ್ಚಾಗಿದೆ.
ಪಾಲಕರು ತಮ್ಮ ಮಕ್ಕಳನ್ನು ಅರಬ್ಬಿ ಶಾಲೆಗೆ ಒಬ್ಬರನ್ನೇ ಕಳುಹಿಸಲು ಹೆದರಿದ್ದಾರೆ.
ಕಾರಣ ಈ ಸಮಸ್ಯೆ ಪರಿಹಾರ ಮಾಡಲು ಮುದ್ದೇಬಿಹಾಳ ಪುರಸಭೆಯ ಮುಖ್ಯ ಅಧಿಕಾರಿಗಳಾದ ಮಲ್ಲನಗೌಡ ಬಿರಾದಾರ್ ರವರು ತಕ್ಷಣ ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಗರದ ಪ್ರಮುಖರು ಈ ವಿಷಯ ಕುರಿತು ದೂರು ಮತ್ತು ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕಿನ ಹಿರಿಯ ಪತ್ರಕರ್ತರಾದ ಎಚ್.ಆರ್. ಬಾಗವಾನ್ ಮತ್ತು ಅಲ್ಲಾಬಕ್ಷ ನಾಯ್ಕೋಡಿ ಫಾರೂಕ್ ಚೌದರಿ ತೀರ ಭಾಷಾ ತೀರ ಮಕಾನದಾರ ಡಿ.ಎಂ. ಚೌದ್ರಿ ಮತ್ತು ಇನ್ನಿತರ ಮುಖಂಡರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








