ಕ್ರೀಡಾಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ಬಿಐಎಸ್ ಶಾಲೆ, ಕಬ್ಬಡಿ, ಅಥ್ಲೇಟಿಕ್ಸ್, ಈಗ ಕರಾಟೆಯಲ್ಲಿ ಚಾಂಪಿಯನ್


ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ತಾಲೂಕಿನ ಬಸವ ಇಂಟರ್ ನ್ಯಾಷನಲ್ ಶಾಲೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲು ಏರುತ್ತಲೇ ಇದೆ. ಅದು ಒಳಾಂಗಣ ಕ್ರೀಡೆಗಳಾಗಲಿ, ಹೊರಾಂಗಣ ಕ್ರಿಡೆಗಳಾಗಲಿ ಈ ಶಾಲೆಯ ಮಕ್ಕಳು ಜಯದ ಮಾಲೆ ಧರಿಸುತ್ತಲೇ ಬರುತ್ತಿದ್ದಾರೆ. ಇನ್ನು ಕ್ರೀಡಾ ಅಭಿಮಾನ ಹೊಂದಿರುವ ಈ ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಹಾಗೂ ಶಾಲೆಯ ಚೇರ್ಮನರಾದ ಶಿವುಕುಮಾರ ಹರ್ಲಾಪುರ ಸರ್ ಅವರು ಸದಾ ಮಕ್ಕಳಿಗೆ ಸ್ಪೂರ್ತಿದಾಯಕರಾಗಿ ಮಕ್ಕಳ ಬೆನ್ನೆಲುಬಾಗಿ ನಿಂತ್ತಿದ್ದಾರೆ.


ಹೌದು..ಇತ್ತಿಚೆಗೆ ಗೋವಾದಲ್ಲಿ ಯುಥ ಗೇಮ್ಸ್ ಕೌನ್ಸಿಲ್ ಇಂಡಿಯಾ ನಡೆಸಿದ ನ್ಯಾಷನಲ್ ಲೇವಲ್ ಕಬ್ಬಡಿ ಹಾಗೂ ಅಥ್ಲೇಟಿಕ್ಸ್ ನಲ್ಲಿ ಮಕ್ಕಳು ಸಾಧನೆ ಮಾಡಿ ಇಂಟರ್ ನ್ಯಾಷನಲ್ ಕಾಂಪಿಟೇಷನ್ ನೇಪಾಳಕ್ಕೆ ತೆರಳುವ ಮುನ್ನವೇ ಈಗ ಈ ಶಾಲೆಯ ಮಕ್ಕಳು ನ್ಯಾಷನಲ್ ಲೇವಲ್‌ನಲ್ಲಿ ಮತ್ತೊಂದು ಸಾಧನೆ ಮಾಡಿ ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಅವರ ಧೈರ್ಯವನ್ನು ಇಮ್ಮಡಿಗೊಳಿಸಿದ್ದಾರೆ. ಮೊನ್ನೆಯಷ್ಟೆ ಗಂಗಾವತಿಯಲ್ಲಿ ನಡೆದ ೮ನೇ ನ್ಯಾಷನಲ್ ಲೆವಲ್ ಕರಾಟೆ ಕಾಂಪಿಟೇಷನ್‌ನಲ್ಲಿ ಈ ಶಾಲೆಯ ಮಕ್ಕಳು ಚಾಂಪಿಯನ್ ರಾಗಿ ಹೊರಹೊಮ್ಮಿದ್ದಾರೆ. ಇದೇ ಮೊದಲ ಬಾರಿಗೆ ಕರಾಟೆಯಲ್ಲಿ ಪಾರ್ಟಿಸಿಪೇಟ್ ಮಾಡಿರುವ ಈ ಶಾಲೆಯ ಮಕ್ಕಳು ಮೊದಲನೇ ಬಾರಿಗೆ ಪ್ರಶಸ್ತಿಗಳ ಸುರಿಮಳೆಯೇ ಹರಿಸಿದ್ದಾರೆ. ಇನ್ನು ಈ ಮಕ್ಕಳ ಸಾಧನೆಗೆ ಶಾಲೆಯ ಪ್ರನ್ಸಿಪಾಲ್ ಪ್ರಭಾ ಚಿನಿವಾರ ಹಾಗೂ ಚೇರರ್ಮನ್‌ರಾದ ಶಿವುಕುಮಾರ ಹರ್ಲಾಪುರ ಅವರು ಹರ್ಷವ್ಯಕ್ತಪಡಿಸಿದ್ದು, ಎಲ್ಲಾ ಮಕ್ಕಳನ್ನು ವೇದಿಕೆಯ ಮೇಲೆ ಸನ್ಮಾನಿಸಿ ಗೌರವಿಸಿ ಸಿಹಿ ಹಂಚಿ ಬೆನ್ನು ತಟ್ಟಿ ಅವರನ್ನು ಪ್ರೋತ್ಸಾಹಿಸಿದರು.


ಇನ್ನು ಹೆಚ್ಚಿನ ಮಟ್ಟದಲ್ಲಿ ನಮ್ಮ ಶಾಲೆಯ ಮಕ್ಕಳು ಬೆಳೆಯಲಿ, ಜೊತೆಗೆ ಇವರ ಸಾಹಸಕ್ಕೆ ನಾವು ಸದಾ ಬೆಂಬಲವಾಗಿ ಇರುತ್ತೆವೆ ಎಂಬ ಮಾತನ್ನು ಅವರು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನು ಈ ಶಾಲೆಯ ಮಕ್ಕಳು ಈಗಾಗಲೇ ರೋಪ ಸ್ಕಿಪಿಂಗ್, ಅಬಾಕಸ್, ಸ್ಕೆಟಿಂಗ್ ಹಾಗೂ ಕಬ್ಬಡಿ, ಅಥ್ಲೇಟಿಕ್ಸ್ ನಲ್ಲಿ ನ್ಯಾಷನಲ್ ಲೇವಲನಲ್ಲಿ ಗೋಲ್ಡ್ ಮೆಡಲ್ ಪಡೆದು ಈ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ಇತ್ತಿಚೆಗೆ ಕ್ರೀಡಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ವಿನೂತನ ಕ್ರಿಡಾಚಟುವಟಿಕೆಗಳೊಂದಿಗೆ ಗ್ರಾಮೀಣ ಪ್ರದೇಶದ ಕ್ರಿಡೆಗಳಿಗೂ ಕೂಡಾ ಸರ್ಕಾರ ಹೆಚ್ಚಿನ ವಲವು ತೋರುತ್ತಿದೆ. ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕರವಾಗಲಿ ಕೆಲವು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಯುವಕರಲ್ಲಿ ಕ್ರೀಡಾ ಮನೋಭಾವವನ್ನು ಹುಟ್ಟುಹಾಕುತ್ತಿದ್ದಾರೆ. ಅದು ಖೋ-ಖೋ ಆಗಲಿ, ಕಬ್ಬಡಿ ಆಗಲಿ, ಕುಸ್ತಿ ಆಗಲಿ ಹೀಗೆ ಗ್ರಾಮೀಣ ಪ್ರದೇಶದ ಕ್ರೀಡೆಗಳಿಗೆ ಹಚ್ಚಿನ ಬೆಂಬಲ ಸೂಚಿಸುತ್ತಿದೆ. ಹೀಗಾಗಿ ಇದರ ಮಹತ್ವನ್ನು ಅರಿತು ಯುವಕರು ಕ್ರೀಡಾ ಕ್ರೇತ್ಷದಲ್ಲಿ ದುಮುಕಿ ತಮ್ಮ ಭವಿಶ್ಯವನ್ನು ಕೂಡ ವೃದ್ದಿಸಕೊಳ್ಳಬಹುದು. ಜೊತೆಗೆ ಕ್ರೀಡಾ ಕೋಟಾದಲ್ಲಿ ಇಂತಿಷ್ಟು ಪರ್ಸಂಟೇಜ್ ನಿಗದಿ ಇದ್ದು, ಅದರ ಮೂಲಕವಾದ್ರು ಯುವಕರು ಮುಂದೆ ನೌಕರ ಪಡೆಯುವ ಸಾದ್ಯತೆ ಇದೆ ಎಂಬುದನ್ನು ಮರೆಯಬಾರದು.


ಒಟ್ಟಿನಲ್ಲಿ ಮುದ್ದೇಬಿಹಾಳ ತಾಲೂಕಿನ ಬಸವ ಇಂಟರ್ ನ್ಯಾಷನಲ್ ಶಾಲೆ ಕ್ರೀಡ ಕ್ಷೇತ್ರದಲ್ಲಿ ರಾಷ್ಟç ಮತ್ತು ಅಂತರಾಷ್ಟಿçಯ ಮಟ್ಟದಲ್ಲಿ ಹೆಸರು ಮಾಡುತ್ತಿರೋದು ಮಾತ್ರ ಸತ್ಯ..

SURAJ RISALDAR
Author: SURAJ RISALDAR

Leave a Comment