ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ಬೊಲೆರೋ ವಾಹನ ಮತ್ತು ಬೈಕ್ ನಡುವೇ ಭೀಕರ ಅಪಘಾತ ಸಂಭವಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ದಲ್ಲಿ ನಡೆದಿದೆ. ಇನ್ನು ಘಟನೆಯಲ್ಲಿ ಇನ್ನೋರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸಗಾಗಿ ಬಾಗಲಕೋಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಹೇಶ್ ಬಸಪ್ಪ ಮಾದರ ಮೃತ ದುರ್ದೈವಿ. ಇನ್ನು ಗಾಯಗೊಂಡ ವಿದ್ಯಾರ್ಥಿ ಬಿದರಕುಂದಿ ಗ್ರಾಮದವನಾಗಿದ್ದಾನೆ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪೂರ್ವ ಸಿದ್ದತಾ ಪರೀಕ್ಷೆ ಮುಗಿಸಿಕೊಂಡು ತಮ್ಮ ಗ್ರಾಮವಾದ ಗೋನಾಳ ಪಿಎನ್ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಬಿದರಕುಂದಿಯ ಬಳಿ ಸಂಜೆ ಈ ದುರ್ಘಟನೆ ಸಂಭವಿಸಿದೆ.
ಬೊಲೆರೋ ವಾಹನ ಎತ್ತುಗಳನ್ನು ತುಂಬಿಕೊAಡು ಬಾಗಲಕೋಟ್ಗೆ ತೆರಳುತ್ತಿದ್ದು ಎನ್ನಾಗಿದೆ. ಇನ್ನು ಘಟನೆ ನಡೆದ ಬಳಿಕ ಬೊಲೆರೋ ಸಮೇತ ಎಸ್ಕೇಪ್ ಆಗುತ್ತಿದ್ದ ಚಾಲಕನನ್ನು ಮುದ್ದೇಬಿಹಾಳ ಠಾಣೆ ಎದುರು ಹಿಡಿದ್ದಾರೆ ಎನ್ನಲಾಗಿದೆ. ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಪಿಐ ಮೊಹ್ಮದ್ ಫೈಸೂದ್ದೀನ್, ಪಿಎಸ್ಐ ಸಂಜಯ ತಿಪ್ಪಾರೆಡ್ಡಿ, ಕ್ರೆöÊಮ್ ಪಿಎಸ್ಐ ಆರ್.ಎಸ್.ಭಂಗಿ, ಎಎಸ್ಐ ಕೆ.ಎಸ್.ಅಸ್ಕಿ ಭೇಟಿ ನೀಡಿ ಕಾನೂನು ಕ್ರಮಕೈಗೊಂಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








