ಮಹಿಳಾ ದಿನಾಚರಣೆ ಅಂಗವಾಗಿ ಬಣಜಿಗ ಸಮಾಜದಿಂದ ವಾಯುವಿಹಾರ ಆಯೋಜನೆ

ಸುನಾಮಿ ನ್ಯೂಸ್ ಮುದ್ದೇಬಿಹಾಳ: ಮಹಿಳಾ ದಿನಾಚರಣೆ ಅಂಗವಾಗಿ ಬಣಜಿಗ ಸಮಾಜದಿಂದ ಮಹಿಳೆಯರಿಗಾಗಿ ವಿಶೇಷವಾಗಿ ವಾಯುವಿಹಾರ ಮತ್ತು ಮುಟ್ಟಿನ ಸಂರಕ್ಷಣೆ ಬಗ್ಗೆ ಮಾಹಿತಿ ಹಮ್ಮಿಕೊಳ್ಳಲಾಗಿದೆ. ಎಂದು ಬಣಜಿಗ ಸಮಾಜದ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಶೋಭಾ ಉಮೇಶ ನಾಗಠಾಣ,ಮತ್ತು ಉಪಾಧ್ಯಕ್ಷೆ ಕವಿತಾ ದಡ್ಡಿ ತಿಳಿಸಿದ್ದಾರೆ.
ರವಿವಾರ ಮಾರ್ಚ್8 ರಂದು ಜರುಗುವ ಮಹಿಳಾ ದಿನಾಚರಣೆಯಂದು ಬೆಳಿಗ್ಗೆ 5:30 ಗಂಟೆಗೆ ಹೂಡ್ಕೋ ರಸ್ತೆಯಲ್ಲಿರುವ ಚನ್ನಮ್ಮ ಮಹಾದ್ವಾರ ದಿಂದ ಪ್ರಾರ್ಥನಾ ಶಾಲೆಯ ವರೆಗೆ ಈ ವಾಯು ವಿಹಾರ(ಕಾಲ್ನಡಿಗೆ) ಇರುವುದು ಮತ್ತು ಅಲ್ಲಿ ಮಹಿಳೆಯರ ಸಮಸ್ಯೆ ಬಗ್ಗೆ ತಿಳಿಸಲಾಗುತ್ತದೆ.ಆದ್ದರಿಂದ ಸಮಾಜದ ಮಹಿಳೆಯರು ಅಷ್ಟೇ ಅಲ್ಲದೆ ಜಾತ್ಯತೀತವಾಗಿ ಮಹಿಳೆಯರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

SURAJ RISALDAR
Author: SURAJ RISALDAR

Leave a Comment