ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾಬಿಐಎಸ್ ವಿದ್ಯಾರ್ಥಿಗಳು ಅಂತರಾಷ್ಟ್ರೀಯಮಟ್ಟಕ್ಕೆ ಆಯ್ಕೆಮೇ.ನಲ್ಲಿ ನೇಪಾಳಕ್ಕೆ ತೆರಳಲಿರುವ ಕ್ರೀಡಾಪಟುಗಳು

ಸುನಾಮಿ ನ್ಯುಸ್ ಮುದ್ದೇಬಿಹಾಳ (Muddebihal) : ಸಾಧನೆಗಳ ಸರದಾರ ಎಂದೇ ಬಿಂಬಿಸಲ್ಪಡುವ ಮುದ್ದೇಬಿಹಾಳ ತಾಲೂಕಿನ ಬಸವ ಇಂಟರ್‌ನ್ಯಾಷನಲ್ ಸಿಬಿಎಸ್‌ಇ ಶಾಲೆಯ ಮಡಿಲಿಗೆ ಈಗ ಮತ್ತೊಂದು ಸಾಧನೆಯ ಗರಿ ಬಂದು ವದಗಿದೆ. ಶಿಕ್ಷಣದೊಂದಿಗೆ ಆಟಕ್ಕೂ ಮಹತ್ವ ನೀಡುತ್ತ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಬಂದಿರುವ ಈ ಶಾಲೆ ಈಗ ಮತ್ತೊಂದು ಸಾಧನೆ ಮಾಡಿ ಇಡೀ ದೇಶವೇ ಈ ಶಾಲೆಯತ್ತ ತಿರುಗಿ ನೋಡುವ ಹಾಗೆ ಮಾಡಿದೆ.
ಹೌದು..ಇತ್ತಿಚೆಗೆ ನಮ್ಮ ನೆರೆ ರಾಜ್ಯ ಗೋವಾದಲ್ಲಿ ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಹಮ್ಮಿಕೊಂಡಿದ್ದ ೫ನೇ ರಾಷ್ಟಿçÃಯ ಮಟ್ಟದ ಕ್ರೀಡಾಕೂಟದಲ್ಲಿ ಈ ಶಾಲೆಯ ಮಕ್ಕಳು ಕಬ್ಬಡಿ ಹಾಗೂ ಅಥ್ಲೇಟಿಕ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ನಾವು ಆಟಕ್ಕೂ ಸೈ..ಪಾಠಕ್ಕೂ ಸೈ ಎಂಬುದನ್ನು ಮತ್ತೊಮ್ಮೆ ಸಾಬಿತು ಪಡಿಸಿದ್ದಾರೆ.

ಕರ್ನಾಟಕದ ಪರವಾಗಿ ಶಾಲೆಯಿಂದ ಹೋದ ಅಥ್ಲೇಟಿಕ್ಸ್ನಲ್ಲಿ ಮೂರನೇಯ ತರಗತಿಯ ವಿದ್ಯಾರ್ಥಿ ಮೊಹ್ಮೊದ್ ಜೀಶಾನ ರಿಸಾಲ್ದಾರ್, ಹಾಗೂ ಬಾಲಕ ಬಾಲಕಿಯರ ಕಬ್ಬಡಿ ತಂಡ ಎರಡು ತಂಡಗಳು ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿ ಇಡೀ ಕರ್ನಾಟಕವೆ ಹೆಮ್ಮೆ ಪಡೆಯುವಂತೆ ಮಾಡಿದ್ದಾರೆ. ಬಾಲಕ ವಿಭಾಗದ ವಿದ್ಯಾರ್ಥಿ ವುಮೇರ ಢವಳಗಿ ಕ್ಯಾಪ್ಟನ್ ನೇತೃತ್ವದ ಕಬ್ಬಡಿ ತಂಡ ಗೋವಾ, ತೆಲಂಗಾಣಾ ಹಾಗೂ ಪೈನಲ್‌ನಲ್ಲಿ ತಮೀಳನಾಡ ತಂಡದೊAದಿಗೆ ಜಯ ಸಾಧಿಸಿ ಗೋಲ್ಡ್ ಮೆಡಲ್ ರೂಪದಲ್ಲಿ ಕಬ್ಬಡಿ ತಂಡ ವಿಜಯದ ಮಾಲೆ ಧರಿಸಿಕೊಂಡಿತು. ಇನ್ನು ಬಾಲಕೀಯರ ಕಬ್ಬಡಿ ತಂಡ ಕೂಡ ಜಯ ಸಾಧಿಸಿ ಗೋಲ್ಡ್ ಮೆಡಲ್ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿತು.
ಇನ್ನು ಅಥ್ಲೇಟಿಕ್ಸ್ ವಿಭಾಗದಲ್ಲಿ 100 ಮಿಟರ್ ಓಟದಲ್ಲಿ ಮೊಹ್ಮದ ಜೀಶಾನ್ ರಿಸಾಲ್ದಾರ್ 15ಸೆಕೆಂಡನಲ್ಲಿ ಓಟವನ್ನು ನಿಗದಿಗೊಳಿಸಿ ಪ್ರಥಮ ಸ್ಥಾನವನ್ನು ಪಡೆದು ವಿಜಯದ ಪತಾಕೆ ಹಾರಿಸಿದರು. ಅಂಡರ್ ಟೆನ್ ನಲ್ಲಿ ಪಾರ್ಟಿಸಿಪೇಟ್ ಮಾಡಿದ ಜೀಶಾನ್ ಓಟ ನೋಡುಗರನ್ನು ಆಶ್ಚರ್ಯಚಕಿತ ಮಾಡಿತು.

ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಆಯೋಜಿಸಿರುವ ಈ ಕ್ರೀಡಾಕೂಟ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಗೋವಾದ ಮಾಪ್ಸಾದಲ್ಲಿ ಪೆಡ್ಡಮ್ಮ ಸ್ಟಡಿಯಂನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯಮಟ್ಟದ ಕ್ರೀಡಾಕೂಟ ಈಗ ಮುಂದೆ ನೇಪಾಳದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಜರುಗಲಿವೆ. ಕರ್ನಾಟಕದಿಂದ ಪ್ರತಿನನಿಧಿಸಿದ ಈ ಬಸವ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಮುಂದೆ ಮೇ ತಿಂಗಳಲ್ಲಿ ನೆಪಾಳದಲ್ಲಿ ನಡೆÀಯುವ ಅಂತರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾರತಪರವಾಗಿ ಪ್ರತಿನಿಧಿಸಲಿದ್ದಾರೆ. ಇದು ನಿಜಕ್ಕೂ ತಾಲೂಕಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಇನ್ನು ಈ ಮಕ್ಕಳ ಸಾಧನೆಗೆ ಶಾಲೆಯ ಪ್ರಿನ್ಸಿಪಾಲ್ ಪ್ರಭಾಚಿನಿವಾರ ಅವರು ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಶಾಲೆಯ ವೇದಿಕೆಯ ಮೇಲೆ ಸನ್ಮಾನಿಸಿ ಗೌರವಿಸಿದರು.

ಇನ್ನು ಈ ವಿದ್ಯಾರ್ಥಿಗಳ ಸಾಧನೆಗೆ ನಗರದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿಯೂ ಜಯ ಸಾಧಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸಲಿ ಎಂದು ಶುಭಹಾರೈಸಿದ್ದಾರೆ. ಮಾಧ್ಯಮ ಮಿತ್ರರು ಹಾಗೂ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ವಿವಿಧ ದಲಿತಪರ ಸಂಘಟನೆಗಳು ಜೀಶಾನ ಮತ್ತು ಕಬ್ಬಡಿ ತಂಡದ ಎಲ್ಲಾ ಆಟಗಾರರನ್ನು ಅಭಿನಂದಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಬಸವ ಇಂಟರ್ ನ್ಯಾಷನಲ್ ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಹಾಗೂ ಚೇರ್ಮನ್ ರಾದ ಶಿವುಕುಮಾರ ಹರ್ಲಾಪುರ ಮತ್ತು ಸಿಬ್ಬಂದಿ ವರ್ಗ ಮತ್ತು ದೈಹಿಕ್ ಶಿಕ್ಷಕರು ಹಾಗೂ ಕೋಚರ್ ಆದ ಶಿದ್ರಾಮ್ ಲಕ್ಷö್ಮಣ ಭಜಂತ್ರಿ ಸರ್ ಅವರಿಗೆ ಸಾರ್ವಜನಿಕರು, ವಿದ್ಯಾರ್ಥಿಗಳ ಕುಟುಂಬಸ್ಥರು, ಸಂಬAಧಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ ಪೋಷಕರಿಗೆ ಹಾಗೂ ಗೋವಾಗೆ ತೆರಳಲು ಸಹಾಯ ಮಾಡಿದ ಪುರಸಭೆ ಸದಸ್ಯ ರಿಯಾಜ್ ಡವಳಗಿ, ಭೀಮಪ್ಪ ಬೀರಾದಾರ, ಆನಂದ ಗಸ್ತಿಗಾರ, ರಾಚ್ಚಯ್ಯ ಮಠ, ಶಿವಾನಂದ ಹೊಸಮನಿ, ದೊಡ್ಡಣಗೌಡ ಪಾಟೀಲ್, ಈರಣ್ಣ ಬೀದರಕುಂದಿ, ಬಸಲಿಂಗಪ್ಪ ಹುಗಾರ, ಪ್ರಜ್ವಲ್ ಹೂಗಾರ, ಈರಣ್ಣ ಲಿಂಗದಳ್ಳಿ, ಮಲ್ಲೇಶ ಕೆಸಾಪುರ್, ಪಾಂಡು ಮುಳ್ಳುರ್, ಶರಣ ಬಸಪ್ಪ ಗಂಗನಗೌಡರ, ವೀರಯ್ಯ ಹಸನಪುರ, ನಾಗರಾಜ ಹಾಗೂ ಶಿವಾನಂದ ಹೊಸಮನಿ ಇವರನ್ನು ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಧನ್ಯವಾದಗಳು ತಿಳಿಸಿದೆ.

ಇನ್ನು ರಾಷ್ಟಿçÃಯಮಟ್ಟದಿಂದ ಅಂತರಾಷ್ಟಿçÃಯ ಮಟ್ಟಕ್ಕೆ ಮಕ್ಕಳನ್ನು ಬೆಳೆಸಿದ ಶಾಲೆಯ ದೈಹಿಕ ಶಿಕ್ಷಕರಾದ ಸಿದ್ರಾಮ ಸರ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಸಿ ಗೌರವಿಸಲಾಯ್ತು. ಜೊತೆಗೆ ಇದೇ ವೇಳೆ ತಮ್ಮ ಗೆಲುವಿಗೆ ಕಾರ್ಣಿಕರ್ತರಾದ ಸಿದ್ರಾಮ ಗುರುಗಳನ್ನು ಎಲ್ಲಾ ಮಕ್ಕಳು ತಮ್ಮ ಕೊರಳನಲ್ಲಿದ್ದ ಗೋಲ್ಡ್ ಮೆಡಲ್ಲನ್ನು ತೆಗೆದು ಅವರಿಗೆ ಹಾಕಿ ಗೌರವಪೂರಕವಾಗಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಪೋಷಕರವತಿಯಿಂದ ಕೂಡ ಸಿದ್ರಾಮ್ ಸರ್ ಅವರನ್ನು ಸನ್ಮಾನಿಸಲಾಯ್ತು.

ಒಟ್ಟಿನಲ್ಲಿ ಈ ಬಸವ ಇಂಟರ್ ನ್ಯಾಷನಲ್ ಶಾಲೆಯ ಲಿಟಲ್ ಚಾಂಪಿಯನ್‌ರು ಮುಂದೆ ಅಂತರಾಷ್ಟಿçÃಯ ಮಟ್ಟದಲ್ಲಿಯೂ ಕೂಡ ಗೆಲುವು ಸಾಧಿಸಿ ಶಾಲೆಯ ಹೆಸರನ್ನು ಇಡೀ ಜಗತ್ತಿಗೆ ಗುರುತಿಸಲಿ ಎಂದು ನಮ್ಮ ಮುದ್ದೇಬಿಹಾಳ ಪತ್ರಿಕಾ ಬಳಗ ಹಾಗೂ ಸುನಾಮಿ ವಾಹಿನಿ ಬಳಗ ಕೂಡ ಆಶಿಸುತ್ತದೆ..

SURAJ RISALDAR
Author: SURAJ RISALDAR

Leave a Comment