ಮುದ್ದೇಬಿಹಾಳ (SUNAMI NEWS) : ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶ್ರೀ ಗವಿ ಸಿದ್ದೇಶ್ವರ ವೇದಿಕೆ ಮೈದಾನದಲ್ಲಿ ಭಾನುವಾರ ಹೊಸದಾಗಿ ತರಕಾರಿ ಮಾರುಕಟ್ಟೆ ವ್ಯಾಪಾರ ಶುರು ಮಾಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪ್ರತೀ ಭಾನುವಾರ ಮಾತ್ರ ತರಕಾರಿ ಮಾರುಕಟ್ಟೆಯನ್ನು ಹುಡ್ಕೋ ಬಡಾವಣೆಯಲ್ಲಿ ನಡೆಸಲಾಗುವುದು. ಇದೇ ವೇಳೆಯಲ್ಲಿ ಪುರಸಭೆಯ ವತಿಯಿಂದ ಬಿ.ಇ.ಓ ಆಫೀಸಿನ ಮುಂದೆ ನಡೆಯುವ ತರಕಾರಿ ಮಾರುಕಟ್ಟೆ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಗುವುದು. ಇದರಿಂದ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಸಹ ಅನುಕೂಲ ಆಗುತ್ತದೆ ಎಂದರು. ಮುಂಜಾನೆ 6 ಗಂಟೆಯಿಂದ ಶುರುವಾದ ತರಕಾರಿ ವ್ಯಾಪಾರ ಮಧ್ಯಾಹ್ನ 12ರ ತನಕ ಭರ್ಜರಿಯಾಗಿ ನಡೆಯಿತು. ಅಲ್ಲಿ ಇಟ್ರಿ ಬಾಳ ಆಕ್ಕಿತ್ತು..ಇಲ್ಲಿ ವಿಶಾಲವಾದ ಸ್ಥಳಾವಕಾಶ ಇದ್ದು ವ್ಯಾಪಾರ ಚೊಲೊ ಆಯ್ತು.ಇನ್ನು ಇಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿದರೇ ಉತ್ತಮವಾಗುತ್ತದೆ ಎಂದು ಕೆಲವು ಜನ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಹುಡ್ಕೋದೊಳಗ ತರಕಾರಿ ವ್ಯಾಪಾರ ಮಾಡಬೇಕಂತ ಬಾಳ ದಿವಸದಿಂದ ನಮ್ಮ ಪ್ರಯತ್ನ ನಡೆಸಿದ್ದೆವು. ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಹ ಸಾಕಷ್ಟು ಸಲ ಮನವಿ ಮಾಡಿದ್ದೆವು. ಇಲ್ಲಿ ವ್ಯಾಪಾರ ಶುರುವಾಗಿದ್ದು ನಮಗೆ ಖುಷಿ ತಂದಿದೆ ಎಂದು ಪುರಸಭೆಯ ಮಾಜಿ ಸದಸ್ಯೆ ಸಂಗಮ್ಮ ಹಣಮಂತರಾಯ ದೇವರಳ್ಳಿ ಸಂತಸ ಹಂಚಿಕೊಂಡರು.
ವಾರದಲ್ಲಿ ಒಂದು ದಿವಸ ಭಾನುವಾರ ಮಾತ್ರ ಇಲ್ಲಿ ವ್ಯಾಪಾರ ನಡೆಸಲಾಗುವುದು. ಉಳಿದ ದಿನ ಮಾರುತಿ ನಗರದ ತರಕಾರಿ ಮಾರುಕಟ್ಟೆ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಹುಡ್ಕೋ ಬಡಾವಣೆ, ನಾಯನೇಗಲಿ ಬಡಾವಣೆ, ಹೆವೆನ್ ಸಿಟಿ ಬಡಾವಣೆಯ ಜನರಿಗೆ ಕೆಳಗಿನ ಮಾರುಕಟ್ಟೆ ದೂರ ಆಗುತ್ತಿದ್ದವು. ಇಲ್ಲಿ ವಾರಕ್ಕೊಮ್ಮೆ ವ್ಯಾಪಾರ ಶುರುವಾಗಿದ್ದು ನಮಗೆಲ್ಲ ಸಂತಸವಾಗಿದೆ ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಮರೇಶ ಗೂಳಿ ಹೇಳಿದರು.ಮಾರುತಿ ನಗರದಲ್ಲಿ ನಡೆಯುತ್ತಿದ್ದ ತರಕಾರಿ ಸಂತೆಯಿಂದ ಎಲ್ಲಾ ಗಾಡಿ ರಸ್ತೆಗೇ ನಿಲ್ಲುತ್ತಿದ್ದರಿಂದ
ಟ್ರಾಫಿಕ್ ಸಮಸ್ಯೆ ಬಹಳ ಆಗುತ್ತಿತ್ತು. ಇಲ್ಲಿ ಬೇಕಾದಷ್ಟು ಜಾಗವಿದೆ. ಧೂಳು ಇಲ್ಲದ, ಸ್ವಚ್ಛವಾದ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಿರುವುದು ನಮಗೆ ಸಂತಸ ತಂದಿದೆ. ಪ್ರತೀ ವಾರಕ್ಕೊಮ್ಮೆ ಹುಡ್ಕೋ ಬಡಾವಣೆಯಲ್ಲಿ ವ್ಯಾಪಾರ ನಡೆಯುವಂತೆ ಸಹಕಾರ ನೀಡಲಾಗುವುದು.
ಆರ್.ಎಸ್.ಬಂಗಿ ಕ್ರೈ ಬ್ರಾಂಚ್ ಪಿಎಸ್ಐ. ಮುದ್ದೇಬಿಹಾಳ
ನಮ್ಮ ಹುಡ್ಕೋದೊಳಗ ತರಕಾರಿ ವ್ಯಾಪಾರ ಮಾಡಬೇಕಂತ ಬಾಳ ದಿವಸದಿಂದ ನಮ್ಮ ಪ್ರಯತ್ನ ನಡೆಸಿದ್ದೆವು. ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಹ ಸಾಕಷ್ಟು ಸಲ ಮನವಿ ಮಾಡಿದ್ದೆವು. ಇಲ್ಲಿ ವ್ಯಾಪಾರ ಶುರುವಾಗಿದ್ದು ನಮಗೆ ಖುಷಿ ತಂದಿದೆ ಎಂದು ಪುರಸಭೆಯ ಮಾಜಿ ಸದಸ್ಯೆ ಸಂಗಮ್ಮ ಹಣಮಂತರಾಯ ದೇವರಳ್ಳಿ ಸಂತಸ ಹಂಚಿಕೊಂಡರು.







