ಮುದ್ದೇಬಿಹಾಳ (SUNAMI NEWS): ಇಲಾಖೆಯ ಇತಿಮಿತಿಯಲ್ಲಿರುವ ವಿಷಯಗಳನ್ನು ಪರಿಗಣಿ ಅಧಿಕಾರಿಗಳು ಜಾಗೃತದಿಂದ ಕೆಲಸ ಮಾಡಬೇಕು, ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಕರ್ನಾಟಕ ಕೋ ಆಪರೇಟವ್ ಬ್ಯಾಂಕ ಸಭಾಭವನದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೆಶಿಸಿ ಅವರು ಮಾತನಾಡಿದರು. ʼಕೆಲ ಇಲಾಖೆಗಳಲ್ಲಿ ಬಹಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಕೆಲಸಗಳನ್ನು ಸರ್ಕಾರದ ನಿರ್ದೆಶನ ಹಾಗೂ ಮಾರ್ಗಸೂಚಿಗಳಂತೆ ನಿಗಾವಹಿಸಿ ಕೆಲಸ ಮಾಡಿ. ಸಾರ್ವಜನಿಕರ ಕುಂದು-ಕೊರತೆ ಜನಸ್ನೇಹಿಯಾಗಿ ನ್ಯಾಯಸಮ್ಮತವಾಗಿ ಪರಿಹರಿಸಿ. ಸುಧಾರಣೆ ಕ್ರಮ ಕೈಗೊಳ್ಳುವ ಮೂಲಕ ಪ್ರಗತಿಗೆ ಬದ್ಧರಾಗಬೇಕು ಇಲ್ಲದಿದ್ದರೆ ನಿಯಮ ಮೀರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆʼ ಎಂದರು.

ಗ್ರಾಮಗಳ ಅಭಿವೃದ್ಧಿಗೆ ಪಿಡಿಓಗಳು ಬದ್ರಬುನಾದಿ ಹಾಕಬೇಕು. ಕ್ರಿಯಾಯೋಜನೆಗಳನ್ನು ರೂಪಿಸಬೇಕು. ಸ್ವಚ್ಛತೆ, ಕುಡಿಯುವ ನೀರು ವಿದ್ಯುತ್, ಸೇರಿದಂತೆ ಆರೋಗ್ಯ, ಮೂಲಸೌಲಭ್ಯ ವದ್ಗಿಸುವತ್ತ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ತಹಶೀಲ್ದಾರ್ ಕೀರ್ತಿ ಚಾಲಕ, ತಾಳಿಕೋಟೆ ತಹಶೀಲ್ದಾರ್ ವಿನಯಾ ಹೂಗಾರ, ನಿಡಗುಂದಿ ತಹಶೀಲ್ದಾರ್ ಎ.ಡಿ.ಅಮರವಾಡಗಿ, ತಾ.ಪಂ ಇಒ ಸಂಗನಗೌಡ ಬಿರಾದಾರ, ತಾಳಿಕೋಟಿ ತಾ.ಪಂ ಇಒ ಅನುಸೂಯಾ ಚಲವಾದಿ, ನಿಡಗುಂದಿ ತಾ.ಪಂ ಇಒ ವೆಂಕಟೇಶ ವಂದಾಲ ಸೇರಿದಂತೆ ಅಧಿಕಾರಿಗಳು ಇದ್ದರು.







