ಶಾಸಕ ನಾಡಗೌಡ ಪರ ಸಚಿವ ಸ್ಥಾನಕ್ಕಾಗಿ ಬಂದ ಕರೆ: ಡಿಎಸ್ಎಸ್ ಖಂಡನೆ, ವಿರೋಧ

ಮುದ್ದೇಬಿಹಾಳ(Sunami News MuddebihaL): ಮತಕ್ಷೇತ್ರದ ಶಾಸಕರಾಗಿರುವ ಸಿ.ಎಸ್. ನಾಡಗೌಡ ಪರ ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್ ಕರೆ ನೀಡಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರ ಮುದ್ದೇಬಿಹಾಳ ಬಂದ್ ಕರೆ ಖಂಡನಿಯ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುದ್ದೆಬಿಹಾಳ ನಗರದ ಅಂಗಡಿಗಳಿಗೆ ಕೆಲವು ಜನ ಹೋಗಿ ಒತ್ತಾಯ ಪೂರಕವಾಗಿ ನಾಳೆ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಹೇಳುವುದರ ಮೂಲಕ ಬಂದ್ ಕರೆಗೆ ಸ್ಪಂದಿಸಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರುವದು ಶಾಸಕ ಸಿ ಎಸ್ ನಾಡಗೌಡ ಘನತೆ ಗೌರವಕ್ಕೆ ಧಕ್ಕೆ ತರುವಂತಿದೆ. ಇದು ಶೋಭೆ ತರುವಂತದ್ದಲ್ಲ. ಅದಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಂದ್ ಕರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಂದ್ ಕರೆಯ ವಿಷಯವಾಗಿ ಪೊಲೀಸ ಇಲಾಖೆ ಯಾವುದೇ ರೀತಿಯಿಂದ ಅನುಮತಿ ಕೊಟ್ಟಿಲ್ಲ ಎಂಬ ಮಾತು ಕೇಳಿ ಬಂದಿದೆ ಎಂದು ಹೇಳಲಾಗಿದೆ. ದಲಿತ ಸಂಘರ್ಷ ಸಮಿತಿಯ ಮುಖಂಡರು ಈ ವಿಷಯವಾಗಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರವರಿಗೆ ಕೇಳಿದಾಗ ಬಂದ್ ವಿಷಯವಾಗಿ ನಾವು ಯಾವುದೇ ರೀತಿಯಿಂದ ಅನುಮತಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ ಅನುಮತಿ ಇಲ್ಲದೆ ಇವರು ಬಂದು ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ನವರೇ ಕಾನೂನು ಸುವ್ಯವಸ್ಥೆ ಉಲ್ಲಂಘಿಸಿ ಪೊಲೀಸ್ ಅನುಮತಿ ಇಲ್ಲದೆ ಬಂದ್ ಮಾಡುತ್ತಿರುವ ವಿಷಯ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಮುಂದಿನ ದಿನಮಾನಗಳಲ್ಲಿ ಇದೇ ರೀತಿ ಹಲವಾರು ಸಂಘಟನೆಗಳು, ಕಾಂಗ್ರೆಸ್ ದಾರಿ ಅನುಸರಿಸಿದರೆ ಆಶ್ಚರ್ಯ ಏನಿಲ್ಲ. ಇವರ ದಾರಿಯಲ್ಲಿ ಅವರು ನಡೆಯುತ್ತಾರೆ.
ಪೊಲೀಸ್ ಇಲಾಖೆ ಮುಂಬರುವ ದಿನಮಾನಗಳಲ್ಲಿ ಈ ವಿಷಯವಾಗಿ ಏನು ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕಾಗಿದೆ.

ಈ ಸಂದರ್ಭದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಈ ಸಂದರ್ಭದಲ್ಲಿ ಪರಶುರಾಮ್ ಹಡಲಗೇರಿ, ಸುರೇಶ ದೊಡಮನಿ, ನಾಗೇಶ್ ಹಡಲಗೇರಿ,
ಮಾಯಪ್ಪ ಬಸರಕೋಡ, ಶಶಿಧರ್ ಹಳ್ಳೂರ, ಮುತ್ತು ಅಗಸಬಾಳ, ಜಹಾಂಗೀರ್ ಹೊಕ್ರಾಣಿ, ಶಿವಪ್ಪ ಮಾದರ ಸೇರಿದಂತೆ ಉಪಸ್ಥಿತರಿದ್ದರು.

SURAJ RISALDAR
Author: SURAJ RISALDAR

Leave a Comment