ವಿಜಯಪುರ: ಸಾವಿನಲ್ಲೂ ಒಂದಾದ ಅಕ್ಕ ತಮ್ಮ ಸೊಲ್ಲಾಪುರ ಸಿದ್ದರಾಮೇಶ್ವರ ದೇವಸ್ಥಾನದ ಕಮಿಟಿ ಸದಸ್ಯ ಸುರೇಶ ಶಂಕರ ಬಳೂರಗಿ ಅವರ ತಾಯಿಯವರಾದ ಶ್ರೀ ಪಾರ್ವತಿ ಶಂಕರ ಬಳುರಗಿ ಅವರು ಅನಾರೋಗ್ಯದ ನಿಮಿತ್ತ ನಿಧನ ಹೊಂದಿದ ಹಿನ್ನೆಲೆ, ಅವರ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ ಸಹೋದರ ನನ್ನ ಕಡೆಯಿಂದ ಅಕ್ಕನಿಗೆ ಕೊನೆಯ ಸೀರೆ ಉಡಸಬೇಕು ಎಂದು ಆಗಮಿಸಿದ ತಮ್ಮ ಶಿವಶಂಕರಪ್ಪ ಕೋಳಿ ಸಾತನದೂದಣಿ ಗ್ರಾಮ ಆತ ಅಕ್ಕನ ಮುಖ ನೋಡುವಷ್ಟರಲ್ಲಿಯೇ ನಿಧನ ಹೊಂದಿದ ಸುದ್ದಿ ನಿಜಕ್ಕೂ ದುಃಖಕರ ಎನಿಸಿತ್ತು.ಅಕ್ಕ ತಮ್ಮನ ಸಾವಿನ ದೃಶ್ಯ ಕುಟುಂಬಸ್ಥರು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತು.ಪಾನಮಂಗರುಳ ಗ್ರಾಮದಲ್ಲಿ ಅಕ್ಕನ ಅಂತ್ಯಕ್ರಿಯೆ ನೆರವೇರಿಸಿದರೆ,ಸಾತನದುದಣಿ ಗ್ರಾಮದಲ್ಲಿ ತಮ್ಮನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.








