ಹಕ್ಕು ಪತ್ರಕ್ಕಾಗಿ ತಹಸಿಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ

ಮುದ್ದೇಬಿಹಾಳ: ಮುದ್ದೇಬಿಹಾಳ ನಗರದ ಕೊಳಚೆ ಪ್ರದೇಶದಲ್ಲಿ ಗುಡಿಸಿಲಗಳನ್ನು ಹಾಕಿಕೊಂಡು ತಗಡಿನ ಷಡ್ಡುಗಳಲ್ಲಿ ವಾಸವಾಗಿರುವ ಬಡವರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಮುದ್ದೇಬಿಹಾಳ ತಹಸಿಲ್ದಾರ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರ ಆರಂಭಗೊಂಡಿದೆ.
ಈ ವಿಷಯವಾಗಿ ಸ್ಥಳೀಯ ಆಡಳಿತ ಮತ್ತು ಪುರಸಭೆ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಾಗಿದೆ.
ಈ ಹಿಂದೆ ಅನೇಕ ಹೋರಾಟಗಳು ಇವರಿಂದ ಆಗಿರುವುದು ಇಲ್ಲಿ ಉಲ್ಲೇಖಿಸಬಹುದು. ರಾಜಕೀಯ ಮುಖಂಡರು ಈ ವಿಷಯ ಕುರಿತು ವಿಶೇಷ ಗಮನ ಹರಿಸುವುದು ಅವಶ್ಯಕ ಆಗಿದೆ.
ಪುರಸಭೆಯ ಆಡಳಿತ ಮಂಡಳಿ ಮುಖಂಡರು ಮತ್ತು ಹಿಂದಿನ ಅಧ್ಯಕ್ಷರು ಈ ವಿಷಯ ಕುರಿತು ಈ ಹಿಂದೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಸಾರ್ವಜನಿಕಗೊಳ್ಳಬೇಕಾಗಿದೆ. ಬಡಜನರು ತಮ್ಮ ಹಕ್ಕು ಪಡೆಯಲು ಈಗ ಬೀದಿಗೆ ಇಳಿದು ಹೋರಾಟ ನಡೆಸಿದ್ದಾರೆ. ಇವರ ಹೋರಾಟ ಯಶಸ್ವಿಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಹಸಿಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸಿ ಹಲಗೆ ಬಾರಿಸುವುದರೊಂದಿಗೆ ಹೋರಾಟಗಾರರು ಸಾರ್ವಜನಿಕರ ಮತ್ತು ಅಧಿಕಾರಿಗಳ ವಿಶೇಷ ಗಮನ ಸೆಳೆದಿರುವುದು ಇಲ್ಲಿ ಉಲ್ಲೇಖಿಸಬಹುದು. ಇವರ ಹೋರಾಟ ಮುಂದೆ ಯಾವ ಸ್ವರೂಪ ಪಡೆಯುತ್ತದೆ ಕಾದು ನೋಡಬೇಕಾಗಿದೆ.

SURAJ RISALDAR
Author: SURAJ RISALDAR

Leave a Comment