ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕೈ ಸಿಲುಕಿ ಕಾರ್ಮಿಕ ಒದ್ದಾಟರಕ್ಷಣೆ ಮಾಡಿ ಮಾನವೀಯತೆ ಮೆರೆದ ಅಗ್ನಿಶಾಮಕ ಸಿಬ್ಬಂದಿ


ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕೈ ಸಿಲಿಕಿಸಿಕೊಂಡು ಒದ್ದಾಡುತ್ತಿದ್ದ ಕಾರ್ಮಿಕನನ್ನು ಅಗ್ನಿಶಾಮಕ ಸಿಬ್ಬಂದಿ ಅವರು ರಕ್ಷಣೆ ಮಾಡಿ ತಮ್ಮದೆ ವಾಹನದಲ್ಲಿ ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದ ಮೇಲೆ ಕಾಂಕ್ರೀಟ್ ಹಾಕುವ ಸಮಯದಲ್ಲಿ ಕಾರ್ಮಿಕ ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕೈ ಸಿಲುಕಿಸಿಕೊಂಡಿದ್ದಾನೆ. ಈ ವೇಳೆ ಸಮುದಾಯ ಭವನದ ಪಕ್ಕದಲ್ಲಿಯೇ ಇದ್ದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೂಡಲೇ ಧಾವಿಸಿ ತಮ್ಮ ಬಳಿ ಇರುವ ಸಲಕರಣೆಗಳನ್ನು ಬಳಸಿ ಕಾಂಕ್ರಿಟ್ ಮಿಕ್ಸರ್‌ನಿಂದ ಕೈಯನ್ನು ಹೊರಗೆ ತೆಗೆದಿದಾರೆ. ಇನ್ನು ಘಟನೆಯಲ್ಲಿ ಕಾರ್ಮಿಕನ ಕೈಗೆ ತೀವ್ರ ಗಾಯವಾಗಿದ್ದು, ನರಗಳು ಹಾಗೂ ಎಲಬು ತುಂಡಾಗಿವೆ.

ಇನ್ನು ಗಾಯದಿಂದ ನರಳುತಿದ್ದ ಕಾರ್ಮಿಕನನ್ನು ಅಗ್ನಿ ಶಾಮಕ ಸಿಬ್ಬಂದಿ ತಮ್ಮದೆ ಜಲವಾಹನದಲ್ಲಿ ತಾಲೂಕಾ ಆಸ್ಪತ್ರೆಗೆ ರವಾನಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡ ಕಾರ್ಮಿಕ ಅಬ್ಬಿಹಾಳ ಗ್ರಾಮದ ಗಂಗಣ್ಣ ಬಸಪ್ಪ ಕಂಬಳ ಎಂದು ಗುರುತಿಸಲಾಗಿದೆ.


(ಇನ್ನು ತೀವ್ರ ಗಾಯಗೊಂಡು ನರಳಾಡುತ್ತಿದ್ದ ಕಾರ್ಮಿಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಅಗ್ನಿಶಾಮಕ ಸಿಬ್ಬಂದಿ ಅವರ ಕಾರ್ಯಕ್ಕೆ ಅಲಿದ್ದ ಇತರ ಕಾರ್ಮಿಕರು ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಶೀ ಬಸವರಾಜ್ ಬಿರಾದರ್, (ಅಗ್ನಿಶಾಮಕ ಅಧಿಕಾರಿಗಳು) ಸುಭಾಸ್ ರಾಥೋಡ್ , ( ಪ್ರಮುಖ ಅಗ್ನಿಶಾಮಕರು) ಶಿವಾನಂದ ವಾಲೀಕಾರ್, ( ಅಗ್ನಿಶಾಮಕ ಚಾಲಕರು ) ತಮ್ಮಣ್ಣ ಗೌಡರ ಸಿದ್ದಣ್ಣ ಪೊಲೇಶಿ, ಬಸವರಾಜ್ ಭಜಂತ್ರಿ , ಸಂತೋಷ್ ಲಮಾಣಿ , ಶರಣು ಬಾಗೇವಾಡಿ , ಲಕ್ಷ್ಮಣ ಕರ್ನಾಲಗಿ, ಕಾರ್ತಿಕ ಅಜಮನಿ, ವಿರೂಪಾಕ್ಷಿ ಪೂಜಾರಿ, ಶಕೀಲ್ ಅವಟಿ. ರಂಗನಗೌಡ ಬಿರಾದಾರ್, ರಾಜು ರಾಥೋಡ್ ಉಪಸ್ಥಿತರಿದ್ದರು.

SURAJ RISALDAR
Author: SURAJ RISALDAR

Leave a Comment