ಸುನಾಮಿ ನ್ಯೂಸ್ ಮುದ್ದೇಬಿಹಾಳ(Muddebihal): ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಅಭಿವೃದ್ಧಿ ವಿಚಾರವಾಗಿ ಮಾಜಿ ಹಾಗೂ ಹಾಲಿ ಶಾಸಕರ ಮಧ್ಯ ವಾಕ್ಸöಮರ್ ಶುರುವಾಗಿದೆ. ತಾಳಿಕೋಟೆಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ವಿಚಾರವಾಗಿ ಉಭಯ ಶಾಸಕರ ಮಧ್ಯ ಆರಂಭವಾದ ಈ ವಾಕ್ಸಮರ್ ತುಣಕುಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಪತ್ರಿಕಾಗೋಷ್ಟೀ ನಡೆಸುವ ಮೂಲಕ ಇಬ್ಬರು ಶಾಸಕರು ಆರೋಪ ಪ್ರತ್ಯಾರೋಪ ಮೈಮೇಲೆ ಎರಚುಕೊಂಡಿದ್ದಾರೆ.
ಹೌದು …ಕಳೆದ ೩೦ ದಿನಗಳಿಂದ ತಾಳಿಕೋಟೆ ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ವಾಗಬೇಕು ಎಂದು ಆಗ್ರಹಿಸಿ ತಾಳಿಕೋಟೆ ಜನತೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹಾಲಿ ಶಾಸಕ ಅಪ್ಪಾಜಿ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದಿದ್ದರು. ಈ ವಿಚಾರವಾಗಿ ಶಾಸಕ ಅಪ್ಪಾಜಿ ನಾಡಗೌಡÀ ಅವರು ಸುದ್ದಿಗೋಷ್ಟಿ ನಡೆಸಿ ಮಾಜಿ ಶಾಸಕರ ವಿರುದ್ಧ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ನಾಲಿಗೆಯ ಮೇಲೆ ಹಿಡಿತವಿರುಲಿ, ಬೇನಾಮಿ ಆಸ್ತಿ ನಾನು ಮಾಡಿಲ್ಲಾ, ಹೆರಿಗೆಯ ಆಸ್ಪತ್ರೆಯ ಹೆಸರಿನಲ್ಲಿ ತಾವೂ ಕಡಿಮೆ ಬೆಲೆಗೆ ಜಮೀನು ಖರೀದಿ ಮಾಡಿ ಜನರಿಗೆ ವಂಚಿಸಿದಿರಿ ಎಂದು ಮಾಜಿ ಶಾಸಕ ನಡಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವಾಗ ನಿಮ್ಮ ಬೆಂಬಲಿಗರನ್ನು ಛೂಬಿಟ್ಟು ಅದಕ್ಕೆ ಅಡ್ಡ ಪಡಿಸುತ್ತಿದ್ದಿರಿ. ಇದಕ್ಕೆ ನಮ್ಮ ಬೆಂಬಲಿಗರು ಕೂಡ ಸುಮ್ಮನಿರಲ್ಲಾ ಎಂದು ಖಾರವಾಗಿಯೇ ಎಚ್ಚರಿಸಿದ್ದರು.

ಇದಕ್ಕೆ ಕೌಂಟರ್ಕೊಟ್ಟಿರುವ ಮಾಜಿ ಶಾಸಕ ಎ. ಎಸ. ಪಟೀಲ್ ನಡಹಳ್ಳಿ ಊರ ಮಧ್ಯ ನಿರ್ಮಾಣವಾಗ್ಬೇಕಿದ್ದ ಪ್ರಜಾಸೌಧ ಶಾಸಕ ಅಪ್ಪಾಜಿ ನಾಡಗೌಡರು ತಮ್ಮ ಲಾಭಕೋಸ್ಕೋರ ತಾಳಿಕೋಟೆ ಹೊರವಲಯದಲ್ಲಿರುವ ತಮ್ಮ ಬೇನಾಮಿ ಹೆಸರಿನಲ್ಲಿರುವ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ನಿಮ್ಮ ಆಡÀಳಿತ ಅವಧಿಯಲ್ಲಿ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಲ್ಯಾಂಡ್ ಆರ್ಮಿಗೆ ಕೊಟ್ಟು ಕಮೀಷನ್ ಪಡೆಯುತ್ತಿದ್ದಿರಿ ಎಂದು ಮಾಜಿ ಶಾಸಕ ನಡಹಳ್ಳಿ ಅವರು ಶಾಸಕ ಅಪ್ಪಾಜಿ ನಾಡಗೌಡರ ವಿರುದ್ಧ ಬಲವಾದ ಆರೋಪ ಮಾಡಿದ್ರು. ನಾನು ನಿಮ್ಮ ಗುಲಾಮಗಿರಿ ಮುಕ್ತ ಮಾಡುವುದಕ್ಕೆ ನಿಮ್ಮ ವಿರುದ್ಧ ಚುನಾವಣೆಗೆ ಬಂದಿದ್ದೇನೆ ಎಂದರು. ಮುದ್ದೇಬಿಹಾಳ-ತಾಳಿಕೋಟೆ, ವಿಜಯಪುರ ಹುಡ್ಕೋ ಹಗರಣ ತಮ್ಮಹೆಸರಿನಲ್ಲಿದೆ ಎಂಬುದು ಮರೆಯಬಾರದು ಎಂದು ಎಚ್ಚರಿಸಿದರು.

ಒಟ್ಟಿನಲ್ಲಿ ಪ್ರಜಾಸೌಧ ನಿರ್ಮಾಣದ ವಿಚಾರವಾಗಿ ನಡೆಯುತ್ತಿರುವ ಹೋರಾಟ ಉಭಯ ಶಾಕರ ಕಚ್ಚಾಟಕ್ಕೆ ಕಾರಣವಾಗಿದ್ದು, ಈಗ ಇಬ್ಬರ ಶಾಸಕರಿಗೆ ಪ್ರತಿಷ್ಠಿತ ಸೌಧವಾಗಿ ಪರಿಣಮಿಸುತ್ತಿದೆ.








