ಮುದ್ದೇಬಿಹಾಳ ಅಂಜುಮನ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳು ಸಂಯುಕ್ತ ಪದವಿ ಪೂರ್ವ ಮಹಾವಿಧ್ಯಾಲಯದ ಮಾಜಿ ಪ್ರಾಚಾರ್ಯರು ಆದಂತಹ ಎಮ್.ಡಿ.ಜರತಾರಘರ್ (81) ಮೇ 13 ರಂದು ಇಂದು ಬೆಳ್ಳಗ್ಗೆ 9:30ಕ್ಕೆನಿಧನ ಹೊಂದಿದರು.ಮೃತರು ಪತ್ನಿ 2 ಗಂಡು ಒಬ್ಬಳು ಹೆಣ್ಣುಮಗಳು ಅಪಾರ ಬಂದು ಬಳಗ ಸ್ನೇಹ ವೃಂದ ಅಪಾರ ಸಂಖ್ಯೆಯ ವಿಧ್ಯಾರ್ಥಿ ಸಂಕುಲ ಬಿಟ್ಟು ಅಗಲಿದ್ದಾರೆ.

ಅವರು ನಿವೃತ್ತ ಜೀವನದಲ್ಲಿ ಜಮಾತ್ ಎ ಇಸ್ಲಾಮಿ ಹಿಂದ್ ಸ್ಥಳಿಯ ಸಂಚಾಲಕರಾಗಿ ಉತ್ತಮವಾದಂತಹ ಸಾಮರಸ್ಯದ ಕಾರ್ಯಕ್ರಮ ನಡೆಸಿದ್ದರು.ಸನ್ಮಾರ್ಗ ವಾರ ಪತ್ರಿಕೆ ಸ್ಥಾನಿಕ ಪ್ರತಿಧಿಯಾಗಿ ಓದುಗ ಸಂಖ್ಯೆಯನ್ನು ಹೆಚ್ಚಿಸಿದ್ದರು.ತಮ್ಮ ಜೀವಿತಾವಧಿಯಲ್ಲಿ ಸಂದೇಶ ಪ್ರಚಾರ ಕಾರ್ಯ ದಲ್ಲಿ ತಮ್ಮ ಜೀವನ ಮುಡುಪಾಗಿಟ್ಡಿದ್ದರು.ಮೃತರ ಅಂತ್ಯಕ್ರೀಯೆ ಇಂದು ಬುಧುವಾರ ರಾತ್ರಿ 8:30ಕ್ಕೆ ಅಂಜುಮನ್ ಈದಗಾ ಮೈದಾನದ ಪಕ್ಕದ ಸ್ಮಾಶನದಲ್ಲಿ ನೆರವೇರಿಸಲಾಗುವುದು.







