ಗುಮ್ಮಟನಗರಿಯಲ್ಲಿ ಯುವಕನ ಹತ್ಯೆ: ಹಣ ಹಾಗೂ ಮೊಬೈಲ್ ಗಾಗಿ ಜಗಳ ಕೊಲೆಯಲ್ಲಿ ಅಂತ್ಯೆ

ವಿಜಯಪುರ (sunami news): ಹಣ ಹಾಗೂ ಮೊಬೈಲ್ ಕೊಡಿಸುವಂತೆ ಪೀಡಿಸುತ್ತಿದ್ದ ತನ್ನ ಗೆಳೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ನಗರದ ಬೆಂಡಿಗೇರಿ ಗಲ್ಲಿಯಲ್ಲಿ ನಡೆದಿದೆ.
ಉಮರಸಾಬ್ ಪಟೇಲ್ 36 ಹತ್ಯೆಯಾಗಿರುವ ದುರ್ದೈವಿ. ನಬೀರಸೂಲ ಹೊಟಗಿ ಮನೆಯಲ್ಲಿ ಇಬ್ಬರು ಸೇರಿಕೊಂಡು ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಉಮರಸಾಬ್ ಮೊಬೈಲ್ ಹಾಗೂ ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ. ಅದಕ್ಕಾಗಿ ಕುಡಿದ ಅಮಲಿನಲ್ಲಿದ ನಬೀರಸೂಲ ಮನೆಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ತಲೆಗೆ ಹಲ್ಲೆಗೈದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

SURAJ RISALDAR
Author: SURAJ RISALDAR

Leave a Comment