ಬಸರಕೋಡ: ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಕೋಟ್ಯಾಂತರ ಮೌಲ್ಯದ ಆಭರಣ ಕಳ್ಳತನ

ಮುದ್ದೇಬಿಹಾಳ(SUNAMI NEWS) :  ತಾಲ್ಲೂಕಿನ ಸುಕ್ಷೇತ್ರ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಕಳ್ಳತನವಾಗಿರುವುದು, ಬೆಳಕಿಗೆ ಬಂದಿದೆ. ಅಂದಾಜು 35 ಕೆಜಿ ತೂಕದ ದೇವರ ಬೆಳ್ಳಿಯ ಮುಖ ಕವಚ ಮತ್ತು ದಿನನಿತ್ಯ ಪೂಜೆಗೆ ಬಳಸುತ್ತಿದ್ದ 10 ಕೆಜಿ ಬೆಳ್ಳಿ ಮೂರ್ತಿ ಸೇರಿದಂತೆ ಒಟ್ಟು 60 ಕೆಜಿಗೂ ಹೆಚ್ಚು ಪ್ರಮಾಣದ ಪೂಜಾ ಸಾಮಗ್ರಿಗಳನ್ನು ಕಳ್ಳರು ಕದ್ದ ಪ್ರಕರಣ ಜರುಗಿದೆ. ಕಳ್ಳತನ ವಾದ, ಬೆಳ್ಳಿಯ ಆಭರಣಗಳ ಮಾರುಕಟ್ಟೆ ಮೌಲ್ಯ ಸುಮಾರು ₹1.20 ಕೋಟಿ ರೂಪಾಯಿಗಳಿಗೆ ಹೆಚ್ಚಿನದು ಎಂದು ತಿಳಿದು ಬಂದಿದೆ.

ಈ ಹಿಂದೆ ಮುದ್ದೇಬಿಹಾಳ ಶಾಸಕರಿದ್ದ ಎ.ಎಸ್.ಪಾಟೀಲ ನಡಹಳ್ಳಿಯವರು ದೇವಸ್ಥಾನಕ್ಕೆ ನೀಡಿದ್ದು ಎಂದು ತಿಳಿದು ಬಂದಿದೆ.

ಕಳ್ಳತನ ಸಮಯದಲ್ಲಿ ಸಿಸಿ ಟಿವಿ ಬಂದ ಆಗಿದ್ದು,ಚರ್ಚೆಗೆ ಗ್ರಾಸವಾಗಿದೆ.

ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ,ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

SURAJ RISALDAR
Author: SURAJ RISALDAR

Leave a Comment