ಡಾ. ಎಸ್. ಜಾನಕಿ ಬಾರದ ಲೋಕಕ್ಕೆ: ಮುದ್ದೇಬಿಹಾಳದಲ್ಲಿ ಗಾನಕೋಗಿಲೆಗೆ ಕಲಾವಿದರಿಂದ ಭಾವಪೂರ್ಣ ಶ್ರದ್ಧಾಂಜಲಿ

ಮುದ್ದೇಬಿಹಾಳ (SUNAMI NEWS): “ಗಾನಕೋಗಿಲೆ ಡಾ. ಎಸ್. ಜಾನಕಿ ಅವರು ತಮ್ಮ ಸುಮಧುರ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ಅಪರೂಪದ ಗಾಯಕಿ. ಅವರ ಗಾಯನ ಅನೇಕ ತಲೆಮಾರಿನ ಕಲಾವಿದರಿಗೆ ಸ್ಫೂರ್ತಿಯಾಗಿದ್ದು, ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ನೀಡಿರುವ ಸಾಂಸ್ಕೃತಿಕ ಕೊಡುಗೆ ಸದಾ ಸ್ಮರಣೀಯವಾಗಿರುತ್ತದೆ” ಎಂದು ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಮುನೀರ್ ಅವಟಿಗೇರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಗಾನಕೋಗಿಲೆ ಡಾ. ಎಸ್. ಜಾನಕಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.


ವೇದಿಕೆಯ ಉಪಾಧ್ಯಕ್ಷ ಎಸ್.ಕೆ. ಘಾಟೆ ಮಾತನಾಡಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಜಾನಕಿ ಅವರ ಸುಮಧುರ ಗಾಯನವನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಅವರ ಅಗಲಿಕೆ ಸಂಗೀತಾಭಿಮಾನಿಗಳು ಹಾಗೂ ಕಲಾವಿದರಿಗೆ ಅಪಾರ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ” ಎಂದು ಸಂತಾಪ ಸೂಚಿಸಿದರು.
ಬಳಿಕ ಡಾ. ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸುವ ಮೂಲಕ ಕಲಾವಿದರು ಗೌರವ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಿ.ಎಲ್. ಮಮದಾಪುರ, ಸಹ ಕಾರ್ಯದರ್ಶಿ ಭರತ್ ಉಪ್ಪಲದಿನ್ನಿ, ದೀಪರತ್ನಶ್ರೀ ಮುದ್ದೇಬಿಹಾಳ, ಶರಣು ಅಮರಣ್ಣನವರ, ವಿರೇಶಗೌಡ ಹಿರೇಗೌಡರ, ಮೊಹಮ್ಮದ್ ಖಾಜಿ, ಬಸವರಾಜ ಹಂದ್ರಾಳ, ಹಣಮಂತ ಮಹಾಲಿಂಗಾಪುರ, ಕಿರಣ ಮುದ್ದೇಬಿಹಾಳ, ಬೆಳ್ಳು ಸಿಂಗಾರ, ವಾಸು ಬಡಿಗೇರ್, ಬಿ.ಎಚ್. ಬಿರಾದಾರ, ಚಂದ್ರಶೇಖರ ಪ್ಯಾಟೆಗೌಡರ, ಟಕ್ಕಳಕಿ, ಆಶಿಫ್ ಸನ್ಸಿಟಿ ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದು,

SURAJ RISALDAR
Author: SURAJ RISALDAR

Leave a Comment