ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯ ಚಟುವಟಿಕೆ ಜೊತೆಗೆ ಕ್ರೀಡಾ ಚಟುವಟಿಕೆ ಕೂಡ ಮುಖ್ಯ: ಡಾ. ನೀಲಪ್ಪ ಹೊಸಮನಿ

ಮದ್ದೇಬಿಹಾಳ (SUNAMI NEWS): ಪಠ್ಯ ಚಟುವಟಿಕೆಯೊಂದಿಗೆ ಸಾಂಪ್ರದಾಯಿಕ , ಸಾಂಕೃತಿ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಬಸವನ ಬಾಗೇವಾಡಿ ಸರ್ಕಾರಿ ಪಿಯು ಕಾಲೇಜ ಪ್ರಿನ್ಸಿಪಾಲ್‌ ಡಾ. ನೀಲಪ್ಪ ಹೊಸಮನಿ ಅವರು ಹೇಳಿದರು.

1990-91ನೇ ಸಾಲಿನ ಸ್ನೇಹ ಸಂಗಮ ಗೆಳೆಯರ ಬಳಗ ವತಿಯಿಂದ ಮುದ್ದೇಬಿಹಾಳ ಪಟ್ಟಣದ ಓಸ್ವಾಲ್‌ ಫಂಕ್ಷನ್‌ ಹಾಲ್‌ ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭ ಹಾಗೂ ಸೀಮಂತ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇತ್ತಿಚೆಗೆ ನೇಪಾಳದಲ್ಲಿ ಯುಥ್‌ ಗೇಮ್ಸ್‌ ಕೌನ್ಸಿಲ್‌ ಇಂಡಿಯಾ ಹಮ್ಮಿಕೊಂಡಿದ್ದ ಕಬ್ಬಡ್ಡಿ  ಪಂದ್ಯಾವಳಿಯಲ್ಲಿ ಗೆದ್ದು ಚಿನ್ನದ ಪದಕ ಪಡದು ದೇಶದ ಕೀರ್ತಿಯನ್ನು ಹೆಚ್ಚಿಸಿದ ತಾಲೂಕಿನ ಕ್ರೀಡಾಪಟುಗಳನ್ನು ಗುರುತಿಸಿದ ಸ್ನೇಹ ಸಂಗಮ ಗೆಳೆಯರ ಬಳಗ ಆ ಮಕ್ಕಳಗೆ ಪ್ರಶಸ್ತಿ ಪುರಸ್ಕಾರ ಮಾಡಿ ಅವರನ್ನು ಗೌರವಿಸಿ ಸನ್ಮಾನಸಿ ಪ್ರೋತ್ಸಾಹಿಸಿದರು.

ಇದೇ ವೇಳೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತಿಚೆಗೆ ಮ್ಕಕಳ ಮೇಲೆ ಹೆಚ್ಚು ವತ್ತಡ ಹಾಕಬಾರದು. ಅವರಲ್ಲಿರುವ ಕೌಶಲ್ಯವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಜೊತೆಗೆ ಇತ್ತಿಚೆಗೆ ವಿನೂತನ ಕ್ರಿಡಾ ಚಟುವಟಿಕೆಗಳನ್ನು ಬೆಳಕಿ ಬರುತ್ತಿವೆ. ಅವು ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತಿವೆ ಎಂದರು. ಇನ್ನು ಪಟ್ಯದೊಂದಿಗೆ ಆಟದಕಡೆಯು ಪೋಷಕರು ಗಮನ ನೀಡಬೇಕು ಎಂದು ಕಿವಿ ಮಾತು ಹೇಳಿದರು.

ಇನ್ನು ಪ್ರಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಲೋಹಿತ ನಾಲತವಾಡ ಅವರು ಇತ್ತಿಚೆಗೆ ಹಲವು ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಮಕ್ಕಳ್ಳಲ್ಲಿ ಕ್ರೀಡಾ ಆಸಕ್ತಿ ಕುಂಟಿತಗೊಳ್ಳುತ್ತಿದೆ. ಇತ್ತಿಚೆಗೆ ಕೇಂದ್ರ ಸರ್ಕಾರ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹಾಗಾಗಿ ಪಾಲಕರು ಮಕ್ಕಳಿಗೆ ಓದುವದರ ಜೊತೆಗೆ ಆಟದಲ್ಲಿಯೂ ಕೂಡ ತೊಡಗಿಸಬೇಕು ಎಂದು ಹೇಳಿದರು.

ಇನ್ನು ಪತ್ರಕರ್ತರಾದ ಸೂರಜ್‌ ರಿಸಾಲ್ದಾರ್‌ ಅವರು ಮಾತನಾಡಿ ಇತ್ತಿಚೆಗೆ ಸರ್ಕಾರ ಸಾಂಕೃತಿಕ ಚಟುವಟಿಕೆ ಜೊತೆಗೆ ಕ್ರೀಡಾ ಚಟುವಟಿಕೆಗೂ ಕೂಡ ಮಹತ್ವ ನೀಡುತ್ತಿದೆ. ಖೇಲೋ ಇಂಡಯಾ, ಸಾಯಿ ದಂತಹ ಹಲವು ಕೇಂದ್ರಗಳನ್ನು ನಿರ್ಮಿಸಿ ಮಕ್ಕಳನ್ನು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಲ್ಳುತ್ತಿದೆ. ಅಲ್ಲಿ ಮಕ್ಳಳ್ಳು ಒಳ್ಳಯೆಯ ಪರಪಾರ್ಮಾನ್ಸ ತೋರಿದ್ರೆ ಖಂಡಿತ ಏಷಿಯನ್‌ ಗೇಮ್ಸ್‌, ಕಾಮನವೆಲ್ಥ್‌, ಓಲಂಪಿಕ್‌ ಗೇಮ್ಸ್‌ಗಳಲ್ಲಿ ನಮ್ಮ ಮಕ್ಕಳನ್ನು ನಾವು ಕಾಣಬಹುದು ಎಂದರು. ಹಾಗಾಗಿ ನಮ್ಮ ಮಕ್ಕಳು ಕೂಡ ಕ್ರೀಡೆಯಲ್ಲಿ ಸಾಧನೆಗೈಯಬೇಕು ಎಂದರೆ ಪೋಷಕರು ಕ್ರಿಡೆಗೆ ಪ್ರೋತ್ಸಾಹಿಸಬೇಕು. ಜೊತೆಗೆ ಇತ್ತಿಚೆಗೆ ಕ್ರೀಡಾ ಮೀಸಲಾತಿಯಲ್ಲಿಯೂ ಕೂಡ ನೌಕರಿ ಪಡೆಯುವಂತಹ ಅವಕಾಶ ಇದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ವೇದಿಕೆ ಮೇಲೆ ಸ್ನೇಹ ಸಂಗಮ ಗೆಳೆಯರ ಬಳಗದ ಅಧ್ಯಕ್ಷ ವಿಶ್ವನಾಥ ಪಾಟೀಲ್‌, ದೈಹಿಕ ಶಿಕ್ಷಕರಾದ ಸಿದ್ರಾಮ ಭಜಂತ್ರಿ ಸರ್‌, ಹಾಗೂ ಪ್ರಿಯಾಂಕಾ ಸಾಲಿಮಠ ಮತ್ತು ಡಾ. ನೀಲಪ್ಪ ಹೊಸಮನಿ ಅವರು ಉಪಸ್ಥಿತರಿದ್ದರು. ಇನ್ನು ಕಾಯಕ್ರಮದಲ್ಲಿ ಸ್ನೇಹ ಸಂಗಮ ಗೆಳೆಯರ ಬಳಗದ ಎಲ್ಲಾ ಮುಖಂಡರು ಹಾಜರಿದ್ದರು.

ಇನ್ನು ಶಿಕ್ಷಕ ಲೋಹಿತ ನಾಲತವಾಡ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದ ನಿರುಪಣೆಯನ್ನು ಎನ್.ಬಿ. ಮುದ್ನಾಳ ವಕೀಲರು ನಿವಹಿಸಿದರು. ಸ್ವಾಗತವನ್ನು ಚಂದ್ರಶೇಕರ ಶಿವಯೋಗಿಮಠ ಅವರು ನೆರೆವೇರಿಸದರು. ಪ್ರಾಥನೆಯನ್ನು ಚಂದ್ರಶೇಖರ ಪ್ಯಾಟಿಗೌಡರ, ವಂದನಾಪರ್ಣೆ ರಾಜುರಾಯಗೊಂಡ ಮಾಡಿದರು.

ಇನ್ನು ನಂತರ ಇದೇ ವೇದಿಕೆಯ ಮೇಲೆ ಸೀಮಂತ ಕಾಯಕ್ರಮ ಕೂಡ ಜರುಗಿತು.

SURAJ RISALDAR
Author: SURAJ RISALDAR

Leave a Comment